ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ; ನನ್ನ ಅವಧಿ ಇನ್ನೂ ಮುಗಿದಿಲ್ಲ ಎಂದ ನಳಿನ್ ಕುಮಾರ್ ಕಟೀಲ್
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆಯೂ ಭಾರೀ ಚರ್ಚೆಯಾಗುತ್ತಿದ್ದು, ಈ ಕುರಿತು ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ 2023ರ ಚುನಾವಣಾ ಪೂರ್ವಸಿದ್ಧತೆಗಾಗಿ ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ವಾರ್ ರೂಮ್ ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
''ನನ್ನ ಅವಧಿ ಮುಗಿದಿದೆ ಅಂತ ಹೇಳಿದವರು ಯಾರು? ಯಡಿಯೂರಪ್ಪನವರು ಅವಧಿ ಮುಗಿದಾಗ ಸಹಜವಾಗಿ ಅಧ್ಯಕ್ಷ ಬದಲಾವಣೆಯಾಗುತ್ತೆ ಅಂತ ಹೇಳಿದ್ದೇ ಹೊರತು ಅವಧಿ ಮುಗಿದಿದೆ ಎಂದು ಅವರು ಹೇಳಿಲ್ಲ. ನನ್ನ ಅವಧಿ ಮುಗಿದಿಲ್ಲ'' ಎಂದು ಸ್ಪಷ್ಟಪಡಿಸಿದರು.
''ಕೇವಲ ಏಳೆಂಟು ತಿಂಗಳಿಗೆ ಸಿಎಂ ಬದಲಾವಣೆ ಪ್ರಶ್ನೆ ಬರಲ್ಲ. ಸಿಎಂ ಬೊಮ್ಮಾಯಿ ಉಳಿದ ಅವಧಿಯನ್ನು ಪೂರೈಸುತ್ತಾರೆ. ಸಹಜವಾಗಿ ರಾಜ್ಯಾಧ್ಯಕ್ಷರ ಅವಧಿ ಮುಗಿದ ಮೇಲೆ ಬದಲಾವಣೆಯಾಗುತ್ತೆ. ಯಾರನ್ನು ಮಾಡಬೇಕೆಂಬುದು ಹೈಕಮಾಂಡ್ ತೀರ್ಮಾನ ಮಾಡುತ್ತೆ'' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಸಿಎಂ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಬಿ.ಎಸ್ ಯಡಿಯೂರಪ್ಪ