ಚಡ್ಡಿ ಸುಟ್ಟಿರುವ ಕಾಂಗ್ರೆಸ್ನವರು ಕೂಡ ಚಡ್ಡಿ ಹಾಕಿ ಶಾಖೆಗೆ ಬರುವ ದಿನ ದೂರವಿಲ್ಲ: ಸಿ.ಟಿ ರವಿ
ಬೆಂಗಳೂರು: ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಆರೆಸ್ಸೆಸ್ (RSS) ಸಮವಸ್ತ್ರ ಖಾಕಿ ಚಡ್ಡಿ ಸುಡುವ ಚಿತ್ರವನ್ನು ಸೋಮವಾರ ಹಂಚಿಕೊಂಡಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ವಿಧಾನ ಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, (C. T. Ravi) 'ಕಾಂಗ್ರೆಸ್ ನವರು ಟ್ವಿಟರ್ನಲ್ಲಿ ಆರೆಸ್ಸೆಸ್ ಚಡ್ಡಿ ಸುಡುವ ಫೋಟೋ ಹಾಕಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಭಾರತ ಜೋಡೋ ಹೆಸರಿನಲ್ಲಿ ಭಾರತೀಯತೆಯನ್ನು ಸುಡುವ ಕೆಲಸ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಆರೆಸ್ಸೆಸ್ ನವರಿಗೆ ಚಡ್ಡಿ ಸುಡಬಹುದು ಆದರೆ, ವಿಚಾರ ಸುಡೋದಕ್ಕೆ ಸಾಧ್ಯವಿಲ್ಲ. ಜವಾಹರ್ ಲಾಲ್ ನೆಹರೂ ಅವರೇ 63ರ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಬಾಗವಹಿಸುವಂತೆ ಆರೆಸ್ಸೆಸ್ ಗೆ ಆಹ್ವಾನಿಸುವಂಥ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇನ್ನು ಚಡ್ಡಿ ಸುಟ್ಟಿರುವ ಕಾಂಗ್ರೆಸ್ನವರು ಕೂಡ ಚಡ್ಡಿ ಹಾಕಿ ಶಾಖೆಗೆ ಬರುವ ದಿನ ದೂರವಿಲ್ಲ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟ್ವಿಟರ್ ನಲ್ಲಿ ಖಾಕಿ ಚಡ್ಡಿ ಸುಡುವ ಚಿತ್ರ ಹಂಚಿಕೊಂಡ ಕಾಂಗ್ರೆಸ್