ಮಳೆಯನ್ನು ಲೆಕ್ಕಿಸದೆ ರಾಹುಲ್ ಭಾಷಣ: ನಟಿ ರಮ್ಯಾ ಪ್ರತಿಕ್ರಿಯೆ ಏನು?
ಮೈಸೂರು: ಮೈಸೂರಿನ ಬಳಿ ಭಾರತ್ ಜೋಡೋ ಯಾತ್ರೆ ವೇಳೆ ಮಳೆಯನ್ನು ಲೆಕ್ಕಿಸದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒದ್ದೆಯಾಗಿಕೊಂಡು ಭಾಷಣ ಮುಂದುವರಿಸಿದ್ದು, ಭಾಷಣ ಮಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು ಮಾಜಿ ಸಂಸದೆ ನಟಿ ರಮ್ಯಾ, ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಕ್ಯಾಪ್ಷನ್ ಕೊಟ್ಟಿದ್ದಾರೆ.
''ಇಲ್ಲಿ ರಾಹುಲ್ ಗಾಂಧಿ ಮಳೆಯಲ್ಲಿ ಭಾಷಣ ಮಾಡುತ್ತಿರುವುದು ಸುದ್ದಿಯಲ್ಲ, ಆ ಜಡಿ ಮಳೆಯಲ್ಲಿಯೂ ಭಾಷಣ (Speech) ಕೇಳಲು ಸಾಕಷ್ಟು ಮಂದಿ ನೆರೆದಿರುವುದೇ ವಿಶೇಷ. ಜನ ನೆರೆದಿರುವುದೇ ಎಲ್ಲವನ್ನೂ ನಿಮಗೆ ತಿಳಿಸುತ್ತದೆ. ಅಂದರೆ ರಾಹುಲ್ ಗಾಂಧಿ ಭಾಷಣ ಕೇಳಲು ಜನ ಕಿಕ್ಕಿರಿದು ನಿಂತಿರುವುದು ಗಮನಸೆಳೆದಿದೆ'' ಎಂದು ಹೇಳಿದ್ದಾರೆ.
ನಿನ್ನೆ (ರವಿವಾರ) ಸಂಜೆ 6.40ರ ಸುಮಾರಿಗೆ ಬಂಡೀಪಾಳ್ಯ ಸಮೀಪಿಸುತ್ತಿದ್ದಂತೆಯೇ ಜೋರು ಮಳೆಯಾಗಿದೆ. ಈ ವೇಳೆ ಎಪಿಎಂಸಿ ಸಮೀಪದಲ್ಲಿ ನಡೆದ ಕಾರ್ನರ್ ಮೀಟಿಂಗ್ನಲ್ಲಿ ಮಳೆಯಲ್ಲೇ ರಾಹುಲ್ ಗಾಂಧಿ ಒದ್ದೆಯಾಗಿಕೊಂಡು ಭಾಷಣ ಮುಂದುವರಿಸಿದ್ದರು.
Rahul gandhi giving a speech in pouring rain is not the story - that the crowd stayed back despite the rain to listen to him- now THAT is telling. https://t.co/xld0TvHDmT
— Ramya/Divya Spandana (@divyaspandana) October 2, 2022