ಕಿತವಾಡ ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದು ಬೆಳಗಾವಿಯ ನಾಲ್ವರು ಯುವತಿಯರು ನೀರು ಪಾಲು
ಬೆಳಗಾವಿ, ನ, 26 : ಪ್ರವಾಸಕ್ಕೆಂದು ತೆರಳಿದ್ದ ನಾಲ್ವರು ಯುವತಿಯರು ಕಿತವಾಡ ಫಾಲ್ಸ್ನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ವರದಿಯಾಗಿದೆ.
ಕರ್ನಾಟಕ -ಮಹಾರಾಷ್ಟ್ರ ಗಡಿ ಭಾಗದ ಚಂದಗಡ ಬಳಿ ಇರುವ ಕಿತವಾಡಾ ಫಾಲ್ಸ್ ನೋಡಲು ಪ್ರವಾಸಕ್ಕೆಂದು ಬೆಳಗಾವಿಯ ಕಾಲೇಜೊಂದ ಸುಮಾರು 40 ವಿದ್ಯಾರ್ಥಿಗಳು ತೆರಳಿದ್ದರೆನ್ನಲಾಗಿದ್ದು, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಐವರು ವಿದ್ಯಾರ್ಥಿನಿಯರ ಪೈಕಿ ನಾಲ್ವರು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಾವಿ ಉಜ್ವಲ ನಗರದ ಅಸಿಯಾ ಮುಝಾವರ (17), ತಸ್ಮಿಯಾ (20 ), ಆನಗೋಳದ ಕುದ್ಶೀಯಾ ಹಾಸಿಂ ಪಟೇಲ್ (20 ) ಹಾಗೂ ಝಟ್ ಪಟ್ ಕಾಲೋನಿಯ ರುಕ್ಸಾರ್ (20) ಎಂಬ ಯುವತಿಯರು ಮೃತಪಟ್ಟಿದ್ದಾರೆ. ಓರ್ವ ಯುವತಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಮಹಾರಾಷ್ಟ್ರದ ಚಂದಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ವಿದ್ಯಾರ್ಥಿಗಳ ಮೃತದೇಹಗಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ತರಲಾಗಿದೆ.
Next Story