ನಟ ಕಿಶೋರ್ ಟ್ವಿಟರ್ ಖಾತೆ ಅಮಾನತು
ಬೆಂಗಳೂರು: ಬಹುಭಾಷಾ ನಟ ಕಿಶೋರ್ ಅವರ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ.
'ಕಿಶೋರ್ ಮಾಡಿದ ತಪ್ಪೇನು..? ಖಾತೆಯನ್ನು ಅಮಾನತು ಮಾಡುವಷ್ಟರ ಮಟ್ಟಿಗೆ ಅವರು ಯಾವ ಪೋಸ್ಟ್ ಹಂಚಿಕೊಂಡರು?' ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಕಿಶೋರ್ ಅವರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಖಾತೆ ಅಮಾನತಿಗೆ ಕಾರಣಗಳು ತಿಳಿದು ಬಂದಿಲ್ಲ.
ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಹೇಳಿದೆ.
ಕಿಶೋರ್ ಅವರು ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಜನರನ್ನು ಎಚ್ಚರಿಸುವಂತಹ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದರು. ಕರ್ನಾಟಕದ ನಂದಿನಿಯನ್ನು ಗುಜರಾತಿನ ಅಮುಲ್ ಜೊತೆ ವಿಲೀನ ಮಾಡಲು ಹೊರಟಿದ್ದ ಕೇಂದ್ರ ಸರ್ಕಾರದ ನೀತಿಯನ್ನು ಕೂಡಾ ಕಿಶೋರ್ ಖಂಡಿಸಿದ್ದರು. ಇದೇ ಕಾರಣಕ್ಕೆ ಈ ರೀತಿ ಆಗಿರಬಹುದು ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ. ಖಾತೆ ಅಮಾನತು ಮಾಡಿರುವ ಬಗ್ಗೆ ಕಾರಣ ನೀಡುವಂತೆಯೂ ಅಭಿಮಾನಿಗಳು ಎಲಾನ್ ಮಸ್ಕ್ ಅವರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 'ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು' ಎಂಬ ವಾಟ್ಸಾಪ್ ಸಂದೇಶದ ಕುರಿತು ನಟ ಕಿಶೋರ್ ಹೇಳಿದ್ದೇನು?
Twitter has suspended actor Kishore's account. pic.twitter.com/6H8wmhjfYN
— S Shyam Prasad (@ShyamSPrasad) January 1, 2023
Dear @elonmusk, Why is @actorkishore account suspended? Please reinstate it. https://t.co/ur0T51nSPa
— Dr. Srinivas Kakkilaya MBBS MD (@skakkilaya) January 2, 2023