ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮೊದಲ ವಿಮಾನ; ಪ್ರಾಯೋಗಿಕ ಹಾರಾಟ ಯಶಸ್ವಿ
ಶಿವಮೊಗ್ಗ: ಶಿವಮೊಗ್ಗದ ಹೊರವಲಯದ ಸೊಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಇಂದು ಮಧ್ಯಾಹ್ನ ಲ್ಯಾಂಡ್ ಆಗಿದೆ. ಪ್ರಾಯೋಗಿಕವಾಗಿ ವಾಯು ಸೇನೆಯ ಬೋಯಿಂಗ್ ವಿಮಾನ ಬಂದಿಳಿದಿದೆ.
ವಾಯು ಸೇನೆಯ ಬೋಯಿಂಗ್ 737 – 7HI ಮಾದರಿಯ ವಿಮಾನ ಇಂದು ಮಧ್ಯಾಹ್ನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದೆ. ಮಧ್ಯಾಹ್ನ 12 ಗಂಟೆಗೆ ಈ ವಿಮಾನ ದೆಹಲಿಯಿಂದ ಹೊರಟಿತ್ತು. ಮಧ್ಯಾಹ್ನ 2.30ರ ಹೊತ್ತಿಗೆ ವಿಮಾನ ಲ್ಯಾಂಡ್ ಆಗಿದೆ. ಯಾವುದೆ ಅಡೆತಡೆ ಇಲ್ಲದೆ ಸ್ಮೂಥ್ ಲ್ಯಾಂಡಿಂಗ್ ಆಗಿದೆ ಆಗಿದೆ ಎಂದು ತಿಳಿದು ಬಂದಿದೆ.
ಮಧ್ಯಾಹ್ನ ವಿಮಾನ ಬರುತ್ತಿದ್ದಂತೆ ಸುತ್ತಮುತ್ತಲ ಪ್ರದೇಶದ ಜನರು ಕುತೂಹಲದಿಂದ ಗಮನಿಸಿದರು. ಭದ್ರತ ಸಿಬ್ಬಂದಿ, ಸುತ್ತಮುತ್ತಲ ಗ್ರಾಮದ ಜನರು ವಿಮಾನವನ್ನು ಕಂಡು ಖುಷಿಪಟ್ಟರು.
ಇದೇ 27 ರಂದು ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರು ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದು ಇದರ ಸಲುವಾಗಿ ಏರ್ಫೋರ್ಸಿನ ವಿಮಾನವು ಪರೀಕ್ಷಾರ್ಥ ಹಾರಾಟ ನಡೆಸಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. @BSYBJP @BSBommai @AAI_Official @KarnatakaWorld #ShivamoggaNews #ShivamoggaAirport pic.twitter.com/qdzhNTBuVe
— B Y Raghavendra (@BYRBJP) February 21, 2023