ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸೇರಿ ರಾಜ್ಯದ 6 ಮಂದಿ ಮೃತ್ಯು
ಕಲಬುರಗಿ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಾಯಚೂರು ಮೂಲದ ಒಂದೇ ಕುಟುಂಬದ ನಾಲ್ವರು ಸೇರಿ 6 ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ವರದಿಯಾಗಿದೆ.
ರಾಯಚೂರು ಮೂಲದ ಒಂದೇ ಕುಟುಂಬದ ಶಫೀದ್ ಹುಸೈನ್ ಸುಲ್ಲದ್, ಬಡೇಜಾನ್ ಸುಲ್ಲದ್, ಸಿರಾಜ್ ಬೇಗಮ್ ಸುಲ್ಲದ್, ಸಮೀರ್ ಸುಲ್ಲದ್ ಹಾಗೂ ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಝೈನುದ್ದೀನ್ ಸಾಹೇಬ್, ಸೇಡಂನ ಬೇಗಮ್ ಮುಹಮ್ಮದ್ ಅಲಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿ ಮದೀನಾಕ್ಕೆ ತೆರಳುತ್ತಿದ್ದವರನ್ನು ಕರೆದೊಯ್ಯುತ್ತಿದ್ದ ಬಸ್ಸಿಗೆ ಟ್ರಕ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಮೃತ ಝೈನುದ್ದೀನ್ ಅವರ ಕುಟುಂಬ ಸದಸ್ಯರು ಮಕ್ಕಾಕ್ಕೆ ತೆರಳಿ ಅಲ್ಲೇ ಅಂತಿಮ ಸಂಸ್ಕಾರ ನಡೆಸಲಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
Next Story