BJP ಶಾಸಕ ಎನ್. ಮಹೇಶ್ ಪೋಸ್ಟರ್ಗೆ ಸಗಣಿ ಬಳಿದು, ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ವೈರಲ್
ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎನ್ .ಮಹೇಶ್ ಅವರ ಭಾವ ಚಿತ್ರ ಇರುವ ಪೊಸ್ಟರ್ ಗೆ ಸೆಗಣಿ ಬಳಿದು ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಒಂದು ಸಾಮಾಜಿಕ ವೈರಲ್ ಆಗುತ್ತಿದೆ.
ಚಾಮರಾಜನಗರದ ಪ್ರವಾಸಿ ಮಂದಿರದ ಬಳಿ ''ಮತ್ತೊಮ್ಮೆ ಬಿಜೆಪಿ'' ಎಂಬ ಜಾಹಿರಾತಿನ ಪೋಸ್ಟರ್ ಹಾಕಲಾಗಿತ್ತು. ಆ ಪೋಸ್ಟರ್ನಲ್ಲಿದ್ದ ಶಾಸಕ ಎನ್. ಮಹೇಶ್ ಭಾವಚಿತ್ರಕ್ಕೆ ಯುವಕನೊಬ್ಬ ಸಗಣಿ ಬಳಿದು, ಚಪ್ಪಲಿಯಿಂದ ಹೊಡೆಯುವುದು ವಿಡಿಯೋದಲ್ಲಿ ದಾಖಲಾಗಿದೆ. ಅಲ್ಲದೇ ಪೋಸ್ಟರ್ ಮೇಲೆ 40% ಎಂದು ಬರೆದು ಆಕ್ರೋಶ ಹೊರ ಹಾಕಿದ್ದಾರೆ.
Next Story