ಹಾವೇರಿ: ಗರ್ಭಿಣಿ ಶ್ವಾನಕ್ಕೆ ರಕ್ತದಾನ ಮಾಡಿದ ಮತ್ತೊಂದು ಶ್ವಾನ
ಹಾವೇರಿ, ಮಾ.12: ಗರ್ಭಿಣಿ ನಾಯಿಗೆ ಅವಶ್ಯವಿದ್ದ ರಕ್ತವನ್ನು ತಮ್ಮ ಆರೋಗ್ಯವಂತ ನಾಯಿಯಿಂದ ಕೊಡಿಸುವ ಮೂಲಕ ನಾಯಿಯ ಮಾಲಕರು ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದಲ್ಲಿ ಎರಡು ತಿಂಗಳ ಗರ್ಭೀಣಿಯಾಗಿದ್ದ 'ಜಿಪ್ಸಿ' ಹೆಸರಿನ ನಾಯಿ ಚಿಕಿತ್ಸೆಗೆ ಗ್ರಾಮದ ಪಶು ಆಸ್ಪತ್ರೆಗೆ ಬಂದಿತ್ತು. ಆಗ ರಕ್ತದ ಕೊರತೆ ಗಮನಿಸಿ ಜಿಪ್ಸಿಯ ಪೋಷಕರಿಗೆ ರಕ್ತದ ಕೊರತೆ ಬಗ್ಗೆ ವೈದ್ಯರು ತಿಳಿಸಿದರು.
ನಂತರ ಜಿಪ್ಸಿಗೆ ರಕ್ತದ ಕೊರತೆ ಇರುವುದು ತಿಳಿದ 'ಜಿಮ್ಮಿ'ಯ ಪೋಷಕರಾದ ಗ್ರಾಮದ ವೈಭವ್ ಪಾಟೀಲ್ ಕುಟುಂಬದವರು ಜಿಮ್ಮಿಯಿಂದ ರಕ್ತದಾನ ಮಾಡಿಸಿ ಗರ್ಭಿಣಿ ನಾಯಿಗೆ ಜೀವದಾನ ಮಾಡಿದ್ದಾರೆ.
Next Story