ಮಡಿಕೇರಿ: ವಿವಾಹಿತೆ ಆತ್ಮಹತ್ಯೆ
ಮಡಿಕೇರಿ ಮಾ.28 : ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ನಗರದ ಹೊಸ ಬಡವಾಣೆಯಲ್ಲಿ ಮಂಗಳವಾರ ವರದಿಯಾಗಿದೆ.
ರವೀಂದ್ರ ಎಂಬುವವರ ಪುತ್ರಿ ಭೂಮಿಕಾ(28) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಇವರಿಗೆ 11 ತಿಂಗಳ ಹೆಣ್ಣು ಮಗುವಿದೆ. ಮೃತರು ಪತಿ ಹಾಗೂ ಮಗುವನ್ನು ಅಗಲಿದ್ದಾರೆ. ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story