ರಸ್ತೆಗಳಿಗೆ ನಟರ ಹೆಸರು: 'ಅಪ್ಪನನ್ನು ಮರೆತಿರುವುದು ಸಣ್ಣತನ' ಎಂದ ವಿಜೇತಾ ಅನಂತಕುಮಾರ್
-

ವಿಜೇತಾ ಅನಂತಕುಮಾರ್ (Photo: Twitter/@vijeta_at)
ಬೆಂಗಳೂರು: ರಾಜ್ಯ ರಾಜಧಾನಿಯ ಪ್ರಮುಖ ರಸ್ತೆಗಳಿಗೆ ನಟರ ಹೆಸರುಗಳನ್ನು ಮರುನಾಮಕರಣ ಮಾಡುತ್ತಿರುವ ಬೆನ್ನಲ್ಲೇ, ಬಿಜೆಪಿ ಹಿರಿಯ ನಾಯಕ ದಿವಂಗತ ಅನಂತ್ ಕುಮಾರ್ ಪುತ್ರಿ ವಿಜೇತಾ ಅನಂತ್ ಕುಮಾರ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ತನ್ನ ಕೊನೆ ಉಸಿರುವವರೆಗೆ ಪಕ್ಷವನ್ನು ಕಟ್ಟಿ ಬೆಳೆಸಿದ ನನ್ನ ಅಪ್ಪನನ್ನು ಮರೆತಿರುವ ಬಿಜೆಪಿಗೆ ಆತ್ಮಾವಲೋಕನ ಅಗತ್ಯ ಎಂದು ವಿಜೇತಾ ಬಿಜೆಪಿಯನ್ನು ಟೀಕಿಸಿದ್ದಾರೆ.
“ಅಪ್ಪ 1987ರಲ್ಲಿ ಅಧಿಕೃತವಾಗಿ ಬಿಜೆಪಿಯನ್ನು ಸೇರಿದರು, ತಮ್ಮ ಕೊನೆಯ ಉಸಿರು ಇರುವವರೆಗೂ ಬಿಜೆಪಿಗಾಗಿ ದುಡಿದರು. ಉದ್ಘಾಟನಾ ಕಾರ್ಯಕ್ರಮಗಳು, ರಸ್ತೆಗಳು, ರೈಲು ಮಾರ್ಗಗಳಲ್ಲಿ ಅವರ ಹೆಸರಿಡುವ ಮೂಲಕ ಅವರ ಕೊಡುಗೆಗಳನ್ನು ಗುರುತಿಸದಿರುವುದು (ಪಕ್ಷದ) ಕ್ಷುಲ್ಲಕ ನಡೆಯಾಗಿದೆ. ಅವರು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆಯುತ್ತಿರುವ ಪಕ್ಷಕ್ಕೆ ಆತ್ಮಾವಲೋಕನ ಅಗತ್ಯ ಇದೆ” ಎಂದು ವಿಜೇತಾ ಅನಂತಕುಮಾರ್ ಟ್ವೀಟ್ ಮಾಡಿದ್ದಾರೆ.
ವಿಜೇತಾ ದಿನ ಪತ್ರಿಕೆಯೊಂದರ ವರದಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಆ ವರದಿಯಲ್ಲಿ ಬೆಂಗಳೂರಿನ ರಸ್ತೆಗಳಿಗೆ ಪುನೀತ್ ರಾಜ್‌ಕುಮಾರ್, ಅಂಬರೀಷ್ ಮತ್ತು ವಜ್ರಮುನಿಯವರ ಹೆಸರು ನಾಮಕರಣ ಮಾಡಿದ ಬಗ್ಗೆ ಉಲ್ಲೇಖಿಸಲಾಗಿದೆ. ಅನಂತಕುಮಾರ್ ರ ಹೆಸರನ್ನು ಸಣ್ಣ ರಸ್ತೆಗೆ ಇಡಲಾಗಿದೆ ಎಂಬ ಆಕ್ಷೇಪಗಳೂ ಆ ವರದಿಯಲ್ಲಿ ಇವೆ.
ವಿಜೇತಾ ಟ್ವೀಟ್ ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಅನಂತಕುಮಾರ್ ಅವರು ಬಲಾಢ್ಯ ಜಾತಿಗೆ ಸೇರಿದವರಾಗಿದ್ದರೆ ಅವರ ಹೆಸರನ್ನೂ ಬಿಜೆಪಿ ನೆನಪಿಸುತ್ತಿತ್ತು ಎಂದು ಟ್ವಿಟರ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇನ್ನು ಕೆಲವರು ಕನ್ನಡಿಗ ನಟರ ಹೆಸರನ್ನು ಎಳೆದು ತಂದಿರುವುದನ್ನು ಪ್ರಶ್ನಿಸಿದ್ದು, ಯಾರ್ಯಾರೋ ಗೊತ್ತಿಲ್ಲದೇ ಇರುವವರ ಹೆಸರು ಇಡಬೇಕಾದರೆ ಏನು ತೊಂದ್ರೆ ಇಲ್ಲ ಕನ್ನಡಿಗರ ಹೆಸರು ಇಡಬೇಕಂದ್ರೆ ಕಷ್ಟ ಅಲ್ವಾ ಎಂದು ಪ್ರತಿಕ್ರಿಯಿಸಿದ್ದಾರೆ.
Appa formally joined BJP in 1987 and worked for it till his last breath.
— Vijeta AnanthKumar (@vijeta_at) March 28, 2023
Not acknowledging his contributions by naming him in inaugural programs, roads, rail lines is trivial. He is alive in the hearts of lakhs of people.
The party that's forgetting him requires self reflection pic.twitter.com/JcPMqHOSPO
Unfortunately he doesn't belong to the most influential caste nor do has created a cult which could turn into votes. But party should remember there is still no replacement it has found who can bridge KA and Delhi like AK did, he took everyone into confidence. It's a void always
— Rohith Simha (@rohith_simha) March 28, 2023
ಸಾವರ್ಕರ್, ಗುಳಿಗೆಹಾಕರ್ ಅಂತಾ ಸಾವಿರಾರು ಹೆಸರಿವೆ, ಅವು ಬಿಟ್ಟು ನಿಮ್ಗೆ ಅಪ್ಪು/ಅಂಬಿ ಅವ್ರ ಫೋಟೋಗಳೇ ಕಾಣುತ್ತಾ ಇವೆ.
— InSane Joe (@Rakshaka007) March 28, 2023
ಯಾಕೇ ಕನ್ನಡಿಗ ಅನಂತ್ ಕುಮಾರ್ ಹೆಸ್ರು ಇಲ್ಲ ಅನ್ನೋದಕ್ಕೆ ಕಾರಣ ನಿಮ್ಮಲ್ಲೇ ಇದೆ. ಅನಂತ್ ಕುಮಾರ್ ಹೆಸ್ರು ಇಟ್ಟಿಲ್ಲಿದಕ್ಕೆ ಕಾರಣ ನಿಮ್ ಮನಸ್ತಿತಿ.
ಉತ್ತರ ಪ್ರಶ್ನೆಯಲ್ಲಿಯೆ ಇದೆ
ಅನಂತ್ ಕುಮಾರ್ ಅವರು ಕರ್ನಾಟಕದ ಪರ ಡೆಲ್ಲಿಯ ಅಧಿಕಾರವಲಯದಲ್ಲಿ ಲಾಬಿ ಮಾಡಿತ್ತಿದ್ದ ಒಬ್ಬ ಸಂಸದರಾಗಿ ಇರುತ್ತಿದ್ದರು ಎಂದು ಪಕ್ಷಾತೀತವಾಗಿ ಅವರು ತೀರಿಕೊಂಡಾಗ ರಾಜಕಾರಣಿಗಳು ನುಡಿದ್ದಿದ್ದರು.ಅವರು ತೀರಿಕೊಂಡ ನಾಲ್ಕು ವರ್ಷಗಳಲ್ಲಿ ಬಿಜೆಪಿಯ ಪೋಸ್ಟರ್ ಗಳಿಂದಲೂ ಮರೆಯಾಗಿದ್ದಾರೆ.ಇದು ಉದ್ದೇಶಪೂರ್ವಕ ಮರೆವೂ ಇರಬಹುದು https://t.co/g8AJ1QdvA1
— ಅಭಿಷೇಕ್ | Abhishek (@gundigre) March 28, 2023
ಶಿವಾಜಿ ಸಾವರ್ಕರ್ ಯಾರ್ಯಾರೋ ಗೊತ್ತಿಲ್ದೆ ಇರೋ ಮಹಶಮನ ದೀನದಯಾಳ್ ಹೆಸರು ಇಡಬೇಕಾದರೆ ಏನು ತೊಂದ್ರೆ ಇಲ್ಲ ಕನ್ನಡಿಗರ ಹೆಸರು ಇಡಬೇಕಂದ್ರೆ ಕಷ್ಟ ಅಲ್ವಾ?? ಇದನ್ನ @BJP4Karnataka ಹೇಳಬೇಕು, ನಿಮ್ಮದೇ ಸರ್ಕಾರ ಅಧಿಕಾರದಲ್ಲಿ ಇದ್ದು ಇಂತ ಪ್ರಶ್ನೆ ಕೇಳೋದು ಎಸ್ಟು ಮೂರ್ಖತನ.
— ಯಶವಂತ | Yashwanth (@Yashu_ts) March 28, 2023
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.