ನಾಮಪತ್ರ ಸಲ್ಲಿಕೆ: 1 ರೂಪಾಯಿ ನಾಣ್ಯಗಳ ಸಂಗ್ರಹಿಸಿ 10 ಸಾವಿರ ರೂ. ಠೇವಣಿ ಭರಿಸಿದ ಪಕ್ಷೇತರ ಅಭ್ಯರ್ಥಿ
ಯಾದಗಿರಿ: ರಾಜ್ಯ ವಿಧಾನಸಭೆ ಚುನಾವಣೆ ರಂಗೇರಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ದಿನದಿಂದ ದಿನಕ್ಕೆ ಚುರುಕುಗೊಂಡಿದ್ದು, ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ.
ಈ ನಡುವೆ ಅಭ್ಯರ್ಥಿಯೊಬ್ಬರು ಒಂದು ರೂಪಾಯಿ ನಾಣ್ಯ ಸಂಗ್ರಹಿಸಿ, ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.
ಮಂಗಳವಾರ ಯಾದಗಿರಿಯ ತಹಶೀಲ್ದಾರ್ ಕಚೇರಿಗೆ ನೇರವಾಗಿ ತೆರಳಿದ ಪಕ್ಷೇತರ ಅಭ್ಯರ್ಥಿ ಯಂಕಪ್ಪ ದೇವಿಂದ್ರಪ್ಪ ಎಂಬವರು 10 ಸಾವಿರ ನಾಣ್ಯಗಳನ್ನು ಚುನಾವಣಾಧಿಕಾರಿಗಳಿಗೆ ನೀಡುವ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೂವರು ಸಿಬ್ಬಂದಿ ಸುಮಾರು 2 ಗಂಟೆ ಕಾಲ ಏಣಿಕೆ ಮಾಡಿದರು.
'ಕಳೆದ ಒಂದು ವರ್ಷದಲ್ಲಿ ಪಾದಯಾತ್ರೆ ಮೂಲಕ ಹಳ್ಳಿಹಳ್ಳಿಗಳಿಗೆ ತೆರಳಿ ಈ ನಾಣ್ಯಗಳನ್ನು ಸಂಗ್ರಹಿಸಿದ್ದೇನೆ. ಮುಂದಿನ ನನ್ನ ರಾಜಕೀಯ ಜೀವನದಲ್ಲಿ ಸ್ವಾಮಿ ವಿವೇಕಾನಂದ ಅವರ ಹೆಸರಿನಲ್ಲಿ ಆಶ್ರಮ ನಿರ್ಮಾಣ ಮಾಡುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನಿಡುವ ಉದ್ದೇಶ ಹೊಂದಿದ್ದೇನೆ' ಎಂದು ಯಂಕಪ್ಪ ದೇವಿಂದ್ರಪ್ಪ ಹೇಳುತ್ತಾರೆ.
VIDEO | Yankappa, an Independent candidate in Karnataka's Yadgir constituency, paid his deposit money of Rs 10,000 entirely in one rupee coins, which he had collected from voters across the constituency. Yankappa filed his nomination papers on Tuesday. pic.twitter.com/iuS3wS03ay
— Press Trust of India (@PTI_News) April 19, 2023
Yankappa Ramasamudra who is contesting as an independent candidate from Yadgir constituency gave Rs.10000 deposit in the form of coin of Rs. 1 collected by villagers. It took 3 hours to count the coins by 3 personnel of staff. @XpressBengaluru .@ramupatil_TNIE .@Amitsen_TNIE pic.twitter.com/THidpdBiu9
— Ramkrishna Badseshi (@Ramkrishna_TNIE) April 19, 2023