ಸಿನೆಮಾ ಪೋಸ್ಟರ್ ಗಳಲ್ಲಿ ಜಗ್ಗೇಶ್ ಮುಖ ಮುಚ್ಚಿದ ಚುನಾವಣಾ ಅಧಿಕಾರಿಗಳು
ದಾವಣಗೆರೆ: ಚುನಾವಣಾ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಚಿತ್ರದ ಪೋಸ್ಟರ್ ಗಳನ್ನು ಜಗ್ಗೇಶ್ ಅವರ ಮುಖ ಕಾಣದಂತೆ ಬಿಳಿ ಹಾಳೆಗಳಿಂದ ಚುನಾವಣಾಧಿಕಾರಿಗಳು ಮುಚ್ಚಿದ್ದಾರೆ.
ಬುಧವಾರ ಬೆಳಗ್ಗೆ ಅಧಿಕಾರಿಗಳು ದಾವಣಗೆರೆ ನಗರದ ಚಿತ್ರಮಂದಿರವೊಂದರ ಮುಂದೆ ಹಾಕಲಾದ ಪೋಸ್ಟರ್ ಗಳನ್ನು ಬಿಳಿ ಹಾಳೆಯಿಂದ ಜಗ್ಗೇಶ್ ಅವರ ಮುಖ ಕಾಣದಂತೆ ಮುಚ್ಚಿದ್ದಾರೆ.
'ರಾಘವೇಂದ್ರ ಸ್ಟೋರ್ಸ್' ಚಿತ್ರ ಎಪ್ರಿಲ್ 28ರಂದು ರಾಜ್ಯದಾದ್ಯಂತ ತೆರೆಕಂಡಿದೆ. ರಾಜ್ಯ ಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.