ಜನರನ್ನು ನನ್ನ ಕೈಯಾರೆ ಕೊಂದಿದ್ದೇನೆ ಎಂದ ಫಿಲಿಪ್ಪೀನ್ಸ್ ಅಧ್ಯಕ್ಷ
ಮನಿಲಾ, ಡಿ. 14: ತಾನು ಡವಾವೊ ನಗರದ ಮೇಯರ್ ಆಗಿದ್ದಾಗ, ಪೊಲೀಸರಿಗೆ ಮಾದರಿಯಾಗುವುದಕ್ಕಾಗಿ ಶಂಕಿತ ಕ್ರಿಮಿನಲ್ಗಳನ್ನು ಕೈಯಾರೆ ಕೊಂದಿದ್ದೇನೆ ಎಂಬುದಾಗಿ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಹೇಳಿದ್ದಾರೆ.
ಸೋಮವಾರ ರಾತ್ರಿ ನಡೆದ ಉದ್ಯಮಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡುಟರ್ಟ್, ಈ ವಿಷಯವನ್ನು ತಿಳಿಸಿದರು.
ಅಕ್ರಮ ಮಾದಕ ದ್ರವ್ಯದ ಪಿಡುಗನ್ನು ಹೋಗಲಾಡಿಸುವ ತನ್ನ ಯೋಜನೆಯ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಿದರು.
ಮಾದಕ ದ್ರವ್ಯವನ್ನು ಕೊನೆಗೊಳಿಸುವ ಡುಟರ್ಟ್ ಯೋಜನೆಯ ಅನುಸಾರ ಪೊಲೀಸರು ಮತ್ತು ನಾಗರಿಕರು, ಅವರು ಜೂನ್ 30ರಂದು ಅಧಿಕಾರಕ್ಕೆ ಬಂದ ಬಳಿಕ ಸಾವಿರಾರು ಜನರನ್ನು ಕೊಂದಿದ್ದಾರೆ.
Next Story