ಗಂಡನಿಂದಲೇ ಹೆಂಡತಿಯ ಕೊಲೆ
ಯಾದಗಿರಿ, ಡಿ.26 : ಗಂಡನೇ ಹೆಂಡತಿಯನ್ನು ಕೊಲೆಗೈದ ಘಟನೆ ಇಂದಿಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಲಕ್ಷ್ಮಿ ಮಡಗನವರ (21) ಎಂದು ಗುರುತಿಸಲಾಗಿದೆ.
ಗಂಡ ರಮೇಶ ಹಾಗೂ ಕುಟುಂಬದವರಿಂದ ಕೃತ್ಯ ನಡೆದಿದ್ದು , ವರದಕ್ಷಿಣೆಗಾಗಿ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.
ಕೊಲೆಗೈದ ಗಂಡ ರಮೇಶ ಪರಾರಿಯಾಗಿದ್ದು, ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಈ ಬಗ್ಗೆ ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
Next Story