ಅಹ್ಮದಿಯಾ ಮಸೀದಿಯಲ್ಲಿ 'ಈದುಲ್ ಅಝ್ ಹಾ' ಆಚರಣೆ
ಮಡಿಕೇರಿ, ಸೆ.2 :ತ್ಯಾಗ ಬಲಿದಾನಗಳ ಹಬ್ಬವಾದ 'ಈದುಲ್ ಅಝ್ ಹಾ' ಪ್ರಯುಕ್ತ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್ ನ ಮಸೀದಿಯಲ್ಲಿ ವಿಶೇಷ ನಮಾಝ್ ಹಾಗೂ ಪ್ರಾರ್ಥನೆ ನೆರವೇರಿತು.ಧರ್ಮಗುರುಗಳಾದ ಹಾಫಿಝ್ ರಫೀಕ್ ಉಜ್ಜಮಾ ಧಾರ್ಮಿಕ ಪ್ರವಚನ ನೀಡಿದರು.
ಜಮಾಅತ್ ಅಧ್ಯಕ್ಷರಾದ ಎಂ.ಬಿ.ಝಹೀರ್ ಅಹ್ಮದ್ ಈ ಸಂದರ್ಭ ಮಾತನಾಡಿದರು.
ಪ್ರಾರ್ಥನೆಯ ನಂತರ ಮುಸ್ಲಿಮ್ ಬಾಂಧವರು ಪರಸ್ಪರ ಆಲಂಗಿಸಿ ಹಬ್ಬದ ಶುಭಾಶಯಗಳನ್ನು ಕೋರಿದರು. ಮಹಿಳೆಯರು, ಮಕ್ಕಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
Next Story