ಸುನೀಲ್ ಚೆಟ್ರಿಗೆ ವಿವಾಹ
ಕೋಲ್ಕತಾ, ಡಿ.4: ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಸೋಮವಾರ ತನ್ನ ದೀರ್ಘಕಾಲದ ಗೆಳತಿ ಸೋನಮ್ ಭಟ್ಟಾಚಾರ್ಯರನ್ನು ವಿವಾಹವಾದರು.
ಸಾಂಪ್ರದಾಯಿಕ ನೇಪಾಳಿ ಟೋಪಿ ಧರಿಸಿ ಕುದುರೆ ಏರಿಕೊಂಡು ಮದುವೆ ಮನೆಗೆ ಪ್ರವೇಶಿಸಿದ ಚೆಟ್ರಿ ಆನಂತರ ಸಾಂಪ್ರದಾಯಿಕ ಬಂಗಾಳಿ ಉಡುಗೆಯನ್ನು ಧರಿಸಿದರು.
ಮೋಹನ್ ಬಗಾನ್ ಎಫ್ಸಿಯ ಲೆಜೆಂಡ್ ಸುಬ್ರತಾ ಭಟ್ಟಾಚಾರ್ಯರ ಪುತ್ರಿ ಸೋನಮ್-ಬೆಂಗಳೂರು ಎಫ್ಸಿ ನಾಯಕ ಚೆಟ್ರಿ ವಿವಾಹ ಸಮಾರಂಭಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿನೆಮಾ, ಫುಟ್ಬಾಲ್ ಹಾಗೂ ಇತರ ಕ್ರೀಡೆಗಳ ಗಣ್ಯರು ಭಾಗವಹಿಸಿದರು.
Next Story