ಸಿಂಧು ಸೆಮಿ ಫೈನಲ್ಗೆ ಶ್ರೀಕಾಂತ್ ಹೊರಕ್ಕೆ
ದುಬೈ, ಡಿ.14: ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ದುಬೈ ಓಪನ್ ವರ್ಲ್ಡ್ ಸೂಪರ್ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಮಹಿಳೆಯರ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸಿಂಧು ಅವರು ಗುರುವಾರ ನಡೆದ ವನಿತೆಯರ ಗ್ರೂಪ್ ‘ಎ’ 2ನೇ ಪಂದ್ಯದಲ್ಲಿ ಜಪಾನ್ನ ಸಾಯಕೊ ಸಾಟೊ ವಿರುದ್ಧ 21-13, 21-12 ಅಂತರದಲ್ಲಿ ಜಯ ಗಳಿಸಿದರು. ಈ ಮೂಲಕ ಸತತ 2 ಜಯ ಸಾಧಿಸಿ ಸೆಮಿಫೈನಲ್ಗೆ ತೇರ್ಗಡೆಯಾಗಿದ್ದಾರೆ.
ಶುಕ್ರವಾರ ನಡೆಯಲಿರುವ ಗ್ರೂಪ್ನ ಅಂತಿಮ ಪಂದ್ಯದಲ್ಲಿ ಸಿಂಧು ಅವರು ಜಪಾನ್ನ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.
Next Story