ಒಂದೇ ಓವರ್ಗೆ ಆರು ಸಿಕ್ಸರ್ ಸಿಡಿಸಿದ ಜಡೇಜ
ರಾಜ್ಕೋಟ್, ಡಿ.15: ಭಾರತದ ಆಲ್ರೌಂಡರ್ ರವೀಂದ್ರ ಜಡೇಜ ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಸಿಡಿಸಿ ಮಿಂಚಿದ್ದಾರೆ. ಶುಕ್ರವಾರ ನಡೆದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂತರ್-ಜಿಲ್ಲಾ ಟ್ವೆಂಟಿ-20 ಟೂರ್ನಿಯಲ್ಲಿ ಜಡೇಜ ಈ ಸಾಧನೆ ಮಾಡಿದ್ದಾರೆ.
ಜಾಮ್ನಗರ ಜಿಲ್ಲೆಯನ್ನು ಪ್ರತಿನಿಧಿಸಿದ ಜಡೇಜ 69 ಎಸೆತಗಳಲ್ಲಿ 154 ರನ್ ಗಳಿಸಿ ತನ್ನ ತಂಡ 6 ವಿಕೆಟ್ಗೆ 239 ರನ್ ಗಳಿಸಲು ನೆರವಾದರು. ಪಂದ್ಯದ 15ನೇ ಓವರ್ನಲ್ಲಿ ನೀಲಂ ವಂಜಾ ಬೌಲಿಂಗ್ನಲ್ಲಿ ಸತತ 6 ಸ್ಸಿಕರ್ ಸಿಡಿಸಿದರು. ಜಡೇಜರ ಇನಿಂಗ್ಸ್ನಲ್ಲಿ 10 ಸಿಕ್ಸರ್ ಹಾಗೂ 15 ಬೌಂಡರಿಗಳಿದ್ವವು.
ಗೆಲುವಿಗೆ ಕಠಿಣ ಸವಾಲು ಪಡೆದ ಅಮ್ರೆಲಿ ತಂಡ 20 ಓವರ್ಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ ಕೇವಲ 118 ರನ್ ಗಳಿಸಿತು. ಜಾಮ್ನಗರ ತಂಡ 121 ರನ್ಗಳಿಂದ ಜಯ ಸಾಧಿಸಿ ನಾಲ್ಕಂಕ ಪಡೆಯಿತು.
Next Story