ಟ್ವೆಂಟಿ 20 ಸರಣಿಗೆ ಲಂಕಾ ತಂಡ ಪ್ರಕಟ: ಮಾಲಿಂಗ ಹೊರಕ್ಕೆ, ಲಕ್ಮಲ್, ಲಹಿರುಗೆ ವಿಶ್ರಾಂತಿ
ಕೊಲಂಬೊ, ಡಿ.16: ಭಾರತ ವಿರುದ್ಧ ಡಿ.20ರಿಂದ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ಶ್ರೀಲಂಕಾ ತಂಡ ಪ್ರಕಟಗೊಂಡಿದ್ದು, ಖ್ಯಾತ ವೇಗಿ ಲಸಿತ್ ಮಾಲಿಂಗ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದೇ ವೇಳೆ ಹಿರಿಯ ಆಟಗಾರರಾದ ಸುರಂಗಾ ಲಕ್ಮಲ್ ಮತ್ತು ಲಹಿರು ತಿರಿಮನ್ನೆ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲಿಗೆ ವಿಶ್ವ ಫೆರ್ನಾಂಡೊ ಮತ್ತು ದಾಸನ್ ಶನಕ ಅವರಿಗೆ ಅವಕಾಶ ನೀಡಲಾಗಿದೆ. ಮೊದಲ ಪಂದ್ಯ ಡಿ.20ರಂದು ಕಟಕ್ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿ.22ರಂದು ಇಂದೋರ್ನಲ್ಲಿ ಮತ್ತು ಮೂರನೇ ಪಂದ್ಯ ಡಿ.24ರಂದು ಮುಂಬೈನಲ್ಲಿ ನಡೆಯಲಿದೆ.
ಶ್ರೀಲಂಕಾ ತಂಡ: ತಿಸ್ಸರಾ ಪೆರೇರಾ (ನಾಯಕ), ಉಪುಲ್ ತರಂಗಾ, ಆ್ಯಂಜೆಲೊ ಮ್ಯಾಥ್ಯೂಸ್, ಕುಸಾಲ್ ಜನಿತಾ ಪೆರೇರಾ, ಧನುಷ್ಕಾ ಗುಣತಿಲಕ, ನಿರೋಶನ್ ಡಿಕ್ವೆಲ್ಲಾ, ಅಸೆಲಾ ಗುಣರತ್ನೆ, ಸದೀರ ಸಮರವಿಕ್ರಮ, ದಾಸನ್ ಶನಕ, ಚತುರಂಗ ಡಿ ಸಿಲ್ವಾ, ಸಚಿತ ಪಥಿರಣ, ಧನಂಜಯ್ ಡಿ ಸಿಲ್ವ, ನುವಾನ್ ಪ್ರದೀಪ್, ವಿಶ್ವಫೆರ್ನಾಂಡೊ, ದುಶ್ಮಂಥ ಚಾಮೀರಾ.
Next Story