13ನೇ ಶತಕ ಸಿಡಿಸಿದ ಶಿಖರ್ ಧವನ್
ಜೋಹಾನ್ಸ್ಬರ್ಗ್, ಫೆ.10: ದಕ್ಷಿಣ ಆಫ್ರಿಕ ವಿರುದ್ಧದ ನಾಲ್ಕನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗ ಶಿಖರ್ ಧವನ್ ಶತಕ ಸಿಡಿಸಿದರು.
100ನೇ ಏಕದಿನ ಪಂದ್ಯವನ್ನಾಡುತ್ತಿರುವ ಶಿಖರ್ ಧವನ್ ಅವರು 13ನೇ ಶತಕ ಗಳಿಸಿದರು.ಧವನ್ ಅವರು 99 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು.
ಎರಡನೇ ವಿಕೆಟ್ಗೆ ಧವನ್ ಮತ್ತು ವಿರಾಟ್ ಕೊಹ್ಲಿ 158 ರನ್ಗಳ ಜೊತೆಯಾಟ ನೀಡಿದರು.
Next Story