ಕಾಮನ್ವೆಲ್ತ್ ಗೇಮ್ಸ್ : ಶೂಟರ್ ರವಿಕುಮಾರ್ಗೆ ಕಂಚು
ಗೋಲ್ಡ್ಕೋಸ್ಟ್, ಎ.8: ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಶೂಟರ್ ರವಿಕುಮಾರ್ ಅವರು ಕಂಚು ಗೆದ್ದುಕೊಂಡಿದ್ದಾರೆ.
ಕ್ರೀಡಾಕೂಟದ ನಾಲ್ಕನೇ ದಿನವಾಗಿರುವ ಇಂದು ರವಿಕುಮಾರ್ ಅವರು 10 ಮೀಟರ್ ಏರ್ ರೈಫಲ್
ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು ಪಡೆದರು. ಇದರೊಂದಿಗೆ ರವಿವಾರ ಭಾರತ ನಾಲ್ಕು ಪದಕಗಳನ್ನು ಜಯಿಸಿದೆ. ರವಿ ಕುಮಾರ್ ಮೊದಲ ಕಂಚು ಜಮೆ ಮಾಡಿದ್ದಾರೆ.
ವೇಟ್ ಲಿಫ್ಟಿಂಗ್ನಲ್ಲಿ 1 ಮತ್ತು ಉಳಿದ ಮೂರು ಪದಕಗಳು ಶೂಟಿಂಗ್ ಮೂಲಕ ಬಂದಿದೆ.
ವೇಟ್ ಲಿಫ್ಟರ್ ಪೂನಮ್ ಯಾದವ್ ಮಹಿಳೆಯರ 69 ಕೆ.ಜಿ. ವಿಭಾಗದಲ್ಲಿ ಚಿನ್ನ ಪಡೆದರು.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಕೆರ್ ಚಿನ್ನ ಮತ್ತು ಹೀನಾ ಸಿಧು ಬೆಳ್ಳಿ ಪಡೆದರು.
ಭಾರತ ಪಡೆದ ಪದಕಗಳ ಸಂಖ್ಯೆ 9ಕ್ಕೇರಿದೆ. ಚಿನ್ನ 6, ಬೆಳ್ಳಿ 2 ಮತ್ತು ಕಂಚು 1
Next Story