ಐಪಿಎಲ್ 2018: ಆರ್ ಸಿಬಿ ವಿರುದ್ಧ ಕೋಲ್ಕತಾಕ್ಕೆ ಜಯ
ಕೋಲ್ಕತಾ , ಎ. 8: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್ ಟ್ವೆಂಟಿ-20 ಟೂರ್ನಿಯ ಮೂರನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ 4 ವಿಕೆಟ್ಗಳ ಜಯ ಗಳಿಸಿದೆ. ಗೆಲುವಿಗೆ 177 ರನ್ ಮಾಡಬೇಕಿದ್ದ ಕೋಲ್ಕತಾ ತಂಡದ ಪರ ಸುನೀಲ್ ನರೇನ್ ಔಟಾಗದೆ 50 ರನ್, ನಾಯಕ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಔಟಾಗದೆ 35 ರನ್, ನಿತೀಶ್ ರಾಣಾ 34 ರನ್ ಕೊಡುಗೆ ನೀಡಿದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ತಂಡ ಆರಂಭಿಕ ದಾಂಡಿಗ ಬ್ರೆಂಡನ್ ಮೆಕಲಮ್ 43 ರನ್, ಎಬಿಡಿ ವಿಲಿಯರ್ಸ್ 44 ರನ್, ಮನ್ದೀಪ್ ಸಿಂಗ್ 37 ರನ್ ಮತ್ತು ನಾಯಕ ವಿರಾಟ್ ಕೊಹ್ಲಿ ನೆರವಿನಲ್ಲಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 176 ರನ್ ಗಳಿಸಿತ್ತು.
Next Story