ಕಾಮನ್ವೆಲ್ತ್ ಗೇಮ್ಸ್: ಬ್ಯಾಡ್ಮಿಂಟನ್ ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ
ಗೋಲ್ಡ್ಕೋಸ್ಟ್, ಎ.9: ಕಾಮನ್ವೆಲ್ತ್ ಗೇಮ್ಸ್ನ ಬ್ಯಾಡ್ಮಿಂಟನ್ ಮಿಶ್ರ ತಂಡ ವಿಭಾಗದಲ್ಲಿ ಭಾರತ ಚಿನ್ನ ಜಯಿಸಿದೆ.
ಕ್ರೀಡಾಕೂಟದ ಐದನೇ ದಿನವಾಗಿರುವ ಸೋಮವಾರ ಫೈನಲ್ನಲ್ಲಿ ಮಲೇಷ್ಯಾವನ್ನು 3-1 ಅಂತರದಲ್ಲಿ ಮಣಿಸಿದ ಭಾರತ ಚಿನ್ನ ಪಡೆಯಿತು.
ಅಶ್ವಿನಿ ಪೊನ್ನಪ್ಪ , ಸಾತ್ವಿಕ್ ರಾಂಕಿರೆಡ್ಡಿ, ಕೆ.ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಅವರನ್ನೊಳಗೊಂಡ ತಂಡ ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಚಿನ್ನ ತಂದು ಕೊಟ್ಟರು. ಇದರೊಂದಿಗೆ ಕಾಮನ್ವೆಲ್ತ್ ಗೇಮ್ಸ್ನ ಮಿಶ್ರ ತಂಡ ವಿಭಾಗದಲ್ಲಿ ಭಾರತ ಮೊದಲ ಚಿನ್ನ ಪಡೆದಿದೆ.
Next Story