ಲಿಯೊನೆಲ್ ಮೆಸ್ಸಿ ದಾಖಲೆ ಸರಿಗಟ್ಟಿದ ಸುನೀಲ್ ಚೆಟ್ರಿ
ಮುಂಬೈ, ಜೂ.10: ಇಂಟರ್ ಕಾಂಟಿನೆಂಟಲ್ ಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ 2-0 ಅಂತರದಿಂದ ಕಿನ್ಯಾವನ್ನು ಮಣಿಸಿದ ಭಾರತ ತಂಡ ಪ್ರಶಸ್ತಿಯನ್ನು ತನ್ನದಾಗಿಸಿದೆ. ಈ ಟೂರ್ನಿಯಲ್ಲಿ 8 ಗೋಲುಗಳನ್ನು ದಾಖಲಿಸಿದ ಚೆಟ್ರಿ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬಾರಿಸಿರುವ ಒಟ್ಟು ಗೋಲುಗಳ ಸಂಖ್ಯೆ 64ಕ್ಕೇರಿದೆ. ಈ ಮೂಲಕ ಅವರು ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ದಾಖಲೆ (64 ಗೋಲುಗಳು) ಯನ್ನು ಸರಿಗಟ್ಟಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಚೆಟ್ರಿ ಅವಳಿ ಗೋಲು ಬಾರಿಸಿ ಭಾರತದ ಗೆಲುವಿಗೆ ನೆರವಾದರು. 8ನೇ ನಿಮಿಷದಲ್ಲಿ 29ನೇ ನಿಮಿಷದಲ್ಲಿ ಅವರು ಗೋಲುಗಳನ್ನು ಬಾರಿಸಿದರು.
Next Story