ಪೋಗಟ್ ಕುಟುಂಬವನ್ನು ಚಹಾ ಕೂಟಕ್ಕೆ ಆಹ್ವಾನಿಸಿದ ದ.ಕೊರಿಯಾದ ಪ್ರಥಮ ಮಹಿಳೆ
'ದಂಗಲ್' ಚಿತ್ರಕ್ಕೆ ಮೆಚ್ಚುಗೆ
ಹೊಸದಿಲ್ಲಿ, ಜು.9: ಬಾಲಿವುಡ್ ಸ್ಟಾರ್ ಆಮಿರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಿ ಹೊಸ ದಾಖಲೆ ಬರೆದಿತ್ತು. ಇದೀಗ ಈ ಚಿತ್ರವನ್ನು ಮೆಚ್ಚಿರುವ ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಜಿಮ್ ಜಂಗ್ ಸೂಕ್ ಮಹಾವೀರ್ ಸಿಂಗ್ ಪೋಗಟ್ ಕುಟುಂಬವನ್ನು ಚಹಾ ಕೂಟಕ್ಕೆ ಆಹ್ವಾನಿಸಿದ್ದಾರೆ.
ಭಾರತಕ್ಕೆ 4 ದಿನಗಳ ಭೇಟಿಗೆ ಆಗಮಿಸಿರುವ ದ.ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ಅವರೊಂದಿಗಿರುವ ಅವರ ಪತ್ನಿ ಜಿಮ್ ಜಂಗ್ ಸೂಕ್ 'ದಂಗಲ್' ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಭಾರತದ ವಿದ್ಯಾರ್ಥಿಗಳ ಜೊತೆ ದಂಗಲ್ ಚಿತ್ರವನ್ನು ವೀಕ್ಷಿಸಿದ ಬಳಿಕ ಪೋಗಟ್ ಕುಟುಂಬದ ಸದಸ್ಯರಿಗೆ ತಮ್ಮ ಜೊತೆ ಚಹಾ ಸೇವಿಸಲು ಆಹ್ವಾನಿಸಿರುವುದಾಗಿ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಖ್ಯಾತ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಮತ್ತು ಅವರ ಮಕ್ಕಳಾದ ಗೀತಾ ಹಾಗೂ ಬಬಿತಾ ಅವರ ಜೀವನಾಧಾರಿತ ಚಿತ್ರ ‘ದಂಗಲ್’ 2016ರಲ್ಲಿ ಬಿಡುಗಡೆಯಾಗಿತ್ತು.
Next Story