ಕ್ರಿಕೆಟ್ ಕೌಶಲ್ಯ ಪ್ರದರ್ಶಿಸಿದ ಟೆನಿಸ್ ಸ್ಟಾರ್ ಫೆಡರರ್!
ಲಂಡನ್, ಜು.10: ನಂ.1 ಶ್ರೇಯಾಂಕದ ಸ್ವಿಸ್ನ ಟೆನಿಸ್ ತಾರೆ ರೋಜರ್ ಫೆಡರರ್ ತನ್ನೊಳಗಿನ ಕ್ರಿಕೆಟ್ ಕೌಶಲ್ಯವನ್ನು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಲಂಡನ್ನಲ್ಲಿ ಈಗ ನಡೆಯುತ್ತಿರುವ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಎದುರಾಳಿ ಅಡ್ರಿಯನ್ ಮನ್ನಾರಿನೋ ವಿರುದ್ಧ ಫೆಡರರ್ ಅಪರೂಪದ ಹೊಡೆತ ಬಾರಿಸಿದರು. ಅವರ ಈ ಹೊಡೆತ ವಿಂಬಲ್ಡನ್ ವೀಕ್ಷಕರ ಗಮನಸೆಳೆಯಿತು.
ಮೊದಲ ಸೆಟ್ನಲ್ಲಿ 2-0 ಮುನ್ನಡೆಯಲ್ಲಿದ್ದ ಫೆಡರರ್ ಎದುರಾಳಿ ಮನ್ನಾರಿನೋ ಮಾಡಿದ ತಪ್ಪು ಸರ್ವ್ ಅನ್ನು ಥೇಟ್ ಕ್ರಿಕೆಟ್ ಶೈಲಿಯಲ್ಲೇ ಡಿಫೆಂಡ್ ಮಾಡಿದರು.
ಈ ಕುರಿತು ವಿಂಬಲ್ಡನ್ ಆಯೋಜಕರು ಟ್ವಿಟರ್ ಹ್ಯಾಂಡಲ್ನಲ್ಲಿ ವಿಡಿಯೋ ಜೊತೆ ಟ್ವೀಟನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ಗೆ(ಐಸಿಸಿ)ಟ್ಯಾಗ್ ಮಾಡಲಾಗಿದೆ. ರೋಜರ್ ಫೆಡರರ್ ಅವರ ಈ ಹೊಡೆತಕ್ಕೆ ಯಾವ ರ್ಯಾಂಕ್ ಕೊಡುತ್ತೀರಿ? ಎಂದು ಕೇಳಲಾಗಿದೆ.
ಇದಕ್ಕೆ ಉತ್ತರಿಸಿರುವ ಐಸಿಸಿ, ರೋಜರ್ ಫೆಡರರ್ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್ಮನ್ ಎಂದು ತಮಾಷೆಯ ಉತ್ತರ ನೀಡಿದೆ. ರ್ಯಾಂಕಿಂಗ್ ಪಟ್ಟಿಯಲ್ಲಿ ಫೆಡರರ್ ಅಗ್ರಸ್ಥಾನದಲ್ಲಿರುವ ರೀತಿಯ ಒಂದು ಇಮೇಜ್ ಸಹ ಹಾಕಲಾಗಿದೆ. ಜೊತೆಗೆ ಫೆಡರರ್ ಹೊಡೆತವನ್ನು ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ರಕ್ಷಣಾತ್ಮಕ ಹೊಡೆತಕ್ಕೆ ಹೋಲಿಸಲಾಗಿದೆ. ಸ್ಪೈಡರ್ ಮ್ಯಾನ್ ಧರಿಸಿನಲ್ಲಿರುವ ಈ ಇಬ್ಬರು ಆಟಗಾರರ ಚಿತ್ರವನ್ನು ಹಾಕಿ ‘ಶ್ರೇಷ್ಠರು ಶ್ರೇಷ್ಠರನ್ನು ಗುರುತಿಸಿದಾಗ’ ಎಂದು ಬರೆಯಲಾಗಿದೆ.
Ratings for @rogerfederer's forward defence, @ICC?#Wimbledon pic.twitter.com/VVAt2wHPa4
— Wimbledon (@Wimbledon) July 9, 2018