ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಮಸ್ಕತ್ಗೆ ತೆರಳಿದ ಭಾರತ
ಹೊಸದಿಲ್ಲಿ, ಆ.15: ಐದನೇ ಆವೃತ್ತಿಯ ಹೀರೊ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಮಿಡ್ ಫೀಲ್ಡರ್ ಮನ್ಪ್ರೀತ್ ಸಿಂಗ್ ನೇತೃತ್ವದ 18 ಸದಸ್ಯರ ಭಾರತ ಹಾಕಿ ತಂಡ ಸೋಮವಾರ ಮಸ್ಕತ್ಗೆ ಪ್ರಯಾಣ ಬೆಳೆಸಿದೆ.
ಮಸ್ಕತ್ನಲ್ಲಿ ಅ.18 ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ವಿಶ್ವದ ನಂ.5ನೇ ತಂಡ ಭಾರತ ಮೊದಲಿಗೆ ಆತಿಥೇಯ ಒಮನ್ ತಂಡವನ್ನು ಎದುರಿಸಲಿದೆ. ಆ ಬಳಿಕ ಮಲೇಶ್ಯಾ, ಪಾಕಿಸ್ತಾನ, ದಕ್ಷಿಣ ಕೊರಿಯಾ ಹಾಗೂ ಜಪಾನ್ ತಂಡಗಳನ್ನು ಎದುರಿಸಲಿದೆ.
‘‘ಮಸ್ಕತ್ನಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯು ನವೆಂಬರ್-ಡಿಸೆಂಬರ್ನಲ್ಲಿ ನಡೆಯುವ ವಿಶ್ವಕಪ್ನಲ್ಲಿ ಆಡಲಿರುವ ವಿಶ್ವದ ಪ್ರಮುಖ ತಂಡಗಳ ವಿರುದ್ಧ ಆಡಲು ಇರುವ ಉತ್ತಮ ಅವಕಾಶವಾಗಿದೆ. ನಾವು ಉತ್ತಮ ಪ್ರದರ್ಶನ ನೀಡಲು ಯತ್ನಿಸಿ ಟೂರ್ನಿಯನ್ನು ಗೆಲ್ಲುತ್ತೇವೆ’’ ಎಂದು ನಾಯಕ ಮನ್ಪ್ರೀತ್ ಸಿಂಗ್ ಹೇಳಿದ್ದಾರೆ.
Next Story