ದಕ್ಷಿಣ ಆಫ್ರಿಕವನ್ನು ಬಗ್ಗು ಬಡಿದ ಭಾರತ 5 -0 ಅಂತರದಲ್ಲಿ ಭರ್ಜರಿ ಗೆಲುವು
ಭುವನೇಶ್ವರ, ನ.28: ಹದಿನಾಲ್ಕನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕ ವಿರುದ್ಧ ಭಾರತ 5-0 ಅಂತರದಲ್ಲಿ ಭರ್ಜರಿ ಜಯ ಗಳಿಸಿದೆ.
ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ಕೆನಡಾವನ್ನು ಬೆಲ್ಜಿಯಂ ಮಣಿಸಿತ್ತು. ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತ ಗೆಲುವಿನ ನಗೆ ಬೀರಿತು. ಭಾರತ ಪ್ರಥಮ ಕ್ವಾರ್ಟರ್ನಲ್ಲಿ 2 ಗೋಲು ದಾಖಲಿಸಿ ಮೇಲುಗೈ ದಾಖಲಿಸಿತ್ತು. 10ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಮತ್ತು 12ನೇ ನಿಮಿಷದಲ್ಲಿ ಆಕಾಶ್ದೀಪ್ ಸಿಂಗ್ ಗೋಲು ಬಾರಿಸಿದರು.
ದ್ವಿತೀಯ ಕ್ವಾರ್ಟರ್ನಲ್ಲಿ ಗೋಲು ಬರಲಿಲ್ಲ. ಈ ಕಾರಣದಿಂದಾಗಿ ದ್ವಿತೀಯಾರ್ಧ ಪೂರ್ಣಗೊಂಡಾಗ ಭಾರತ 2-0 ಮುನ್ನಡೆ ಸಾಧಿಸಿತ್ತು. ಮೂರನೇ ಕ್ವಾರ್ಟರ್ನಲ್ಲಿ ಸಿಮ್ರಾನ್ಜಿತ್ ಸಿಂಗ್ (43ನೇ ನಿಮಿಷ) ಮತ್ತು ಲಲಿತ್ ಉಪಾಧ್ಯಾಯ (45ನೇ ನಿ.) ಗೋಲು ಜಮೆ ಮಾಡಿದರು. ಭಾರತಕ್ಕೆ 4-0 ಮುನ್ನಡೆ.
ಕೊನೆಯಲ್ಲಿ ಸಿಮ್ರಾನ್ಜಿತ್ ಸಿಂಗ್(46ನೇ ನಿ.) ಎರಡನೇ ಗೋಲು ದಾಖಲಿಸುವ ಮೂಲಕ ಭಾರತ 5-0 ಅಂತರದಲ್ಲಿ ಜಯ ದಾಖಲಿಸಿತು.
,,,,,
ಭಾರತ - ದಕ್ಷಿಣ ಆಫ್ರಿಕ
5 - 0
ಮನ್ದೀಪ್ ಸಿಂಗ್ 10ನೇ ನಿಮಿಷ
ಆಕಾಶ್ದೀಪ್ ಸಿಂಗ್ 12ನೇ ನಿಮಿಷ
ಸಿಮ್ರಾನ್ಜಿತ್ ಸಿಂಗ್ 43ನೇ ನಿಮಿಷ
ಲಲಿತ್ ಉಪಾಧ್ಯಾಯ 45ನೇ ನಿಮಿಷ
ಸಿಮ್ರಾನ್ಜಿತ್ ಸಿಂಗ್ 46ನೇ ನಿಮಿಷ