ಫ್ರಾನ್ಸ್ ಮೊದಲ ಬಾರಿ ಕ್ವಾ.ಫೈನಲ್ ಗೆ ತೇರ್ಗಡೆ
ಭುವನೇಶ್ವರ, ಡಿ.10: ಸೋಮವಾರ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಮತ್ತೊಂದು ಕ್ರಾಸ್ ಓವರ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಚೊಚ್ಚಲ ವಿಶ್ವಕಪ್ ಆಡುತ್ತಿರುವ ಚೀನಾವನ್ನು 1-0 ಗೋಲು ಅಂತರದಿಂದ ಸೋಲಿಸಿ ಮೊದಲ ಬಾರಿ ಟೂರ್ನಿಯ ಅಂತಿಮ-8ರ ಸುತ್ತಿಗೆ ತೇರ್ಗಡೆಯಾಗಿದೆ.
ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಫ್ರಾನ್ಸ್ ಪರ 36ನೇ ನಿಮಿಷದಲ್ಲಿ ಟಿಮೊಥಿ ಕ್ಲೆಮೆಂಟ್ ಏಕೈಕ ಗೋಲು ಬಾರಿಸಿ 1-0 ಅಂತರದ ಗೆಲುವಿನ ರೂವಾರಿಯಾದರು. ಫ್ರಾನ್ಸ್ ಡಿ.12 ರಂದು ನಡೆಯುವ ಮುಂದಿನ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತಂಡದ ಸವಾಲು ಎದುರಿಸಲಿದೆ. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಗೋಲುರಹಿತವಾಗಿ ಕೊನೆಗೊಂಡಿತು.
ಫ್ರಾನ್ಸ್ ತಂಡ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನವನ್ನು 5-3 ಅಂತರದಿಂದ ಸೋಲಿಸಿ ಸ್ಪೇನ್ ತಂಡವನ್ನು ಹಿಂದಿಕ್ಕಿ ಕ್ರಾಸ್ ಓವರ್ಗೆ ಅರ್ಹತೆ ಪಡೆದಿತ್ತು.
Next Story