ಆಸ್ಪತ್ರೆಗೆ ದಾಖಲಾದ ನ್ಯೂಝಿಲೆಂಡ್ ನಾಯಕ ವಿಲಿಯಮ್ಸನ್
ವೆಲ್ಲಿಂಗ್ಟನ್, ಮಾ.11: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಭುಜನೋವಿಗೆ ಒಳಗಾಗಿರುವ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮುನ್ನೆಚ್ಚರಿಕೆಯ ಕ್ರಮವಾಗಿ ವಿಲಿಯಮ್ಸನ್ರ ಎಡಭುಜದ ಸ್ಕಾನಿಂಗ್ ನಡೆಸಲು ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿರುದ್ದಾಗಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಂಡದ ವಕ್ತಾರ ತಿಳಿಸಿದ್ದಾರೆ.
ರವಿವಾರ ಬಾಂಗ್ಲಾದೇಶದ ಮೊದಲ ಇನಿಂಗ್ಸ್ ವೇಳೆ ಫೀಲ್ಡಿಂಗ್ ನಡೆಸುತ್ತಿದ್ದಾಗ ವಿಲಿಯಮ್ಸನ್ ಎಡ ಭುಜಕ್ಕೆ ಗಾಯವಾಗಿತ್ತು.
ಗಾಯದ ಸಮಸ್ಯೆ ಹೊರತಾಗಿಯೂ ಬ್ಯಾಟಿಂಗ್ಗೆ ಇಳಿದಿದ್ದ ವಿಲಿಯಮ್ಸನ್ ಬ್ಯಾಟಿಂಗ್ ವೇಳೆ ಎರಡು ಬಾರಿ ವೈದ್ಯಕೀಯ ಸಿಬ್ಬಂದಿಯಿಂದ ಉಪಚಾರ ಪಡೆಯಬೇಕಾಯಿತು. ಭುಜನೋವಿನ ಮಧ್ಯೆಯೂ 30ನೇ ಅರ್ಧಶತಕ ದಾಖಲಿಸಿದ ವಿಲಿಯಮ್ಸನ್ 74 ರನ್ ಗಳಿಸಿ ಸ್ಪಿನ್ನರ್ ತೈಜುಲ್ ಇಸ್ಲಾಮ್ಗೆ ವಿಕೆಟ್ ಒಪ್ಪಿಸಿದರು.
Next Story