ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ರವಿಶಾಸ್ತ್ರಿ ಪುನರಾಯ್ಕೆ
ಹೊಸದಿಲ್ಲಿ, ಆ.16: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ರವಿಶಾಸ್ತ್ರಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಇಂದು ತಿಳಿಸಿದೆ. ಈ ಸಮಿತಿಯಲ್ಲಿ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಮತ್ತು ಶಾಂತ ರಂಗಸ್ವಾಮಿ ಇದ್ದಾರೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ರವಿಶಾಸ್ತ್ರಿ ಜೊತೆ ಮೈಕ್ ಹೆಸ್ಸೋನ್, ರಾಬಿನ್ ಸಿಂಗ್, ಟಾಮ್ ಮೂಡಿ, ಲಾಲ್ ಚಂದ್ ರಜಪೂತ್ ಅರ್ಜಿ ಸಲ್ಲಿಸಿದ್ದರು. 2019ರ ವಿಶ್ವಕಪ್ ವೇಳೆ ರವಿಶಾಸ್ತ್ರಿಯವರ ಕೋಚ್ ಅವಧಿ ಮುಗಿದಿತ್ತು. ಆದರೆ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಅವರ ಅವಧಿಯನ್ನು ಹೆಚ್ಚಿಸಲಾಗಿತ್ತು.
Next Story