ಏಶ್ಯನ್ ಯೂತ್, ಜೂನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್
ಮೊದಲ ದಿನ ಭಾರತಕ್ಕೆ ಎರಡು ಪದಕ
ಟಾಷ್ಕೆಂಟ್(ಉಝ್ಬೇಕಿಸ್ತಾನ), ಫೆ.14: ಉಝ್ಬೇಕಿಸ್ತಾನದ ತಾಷ್ಕೆಂಟ್ನಲ್ಲಿ ಆರಂಭವಾದ ಏಶ್ಯನ್ ಯೂತ್ ಹಾಗೂ ಜೂನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನ ಮೊದಲ ದಿನ ಎರಡು ಪದಕಗಳನ್ನು ಜಯಿಸಿದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಭಾರತದ ಮಹಿಳಾ ಲಿಫ್ಟರ್ಗಳು ಬೆಳ್ಳಿ ಹಾಗೂ ಕಂಚಿನ ಪದಕವನ್ನು ಬಾಚಿಕೊಂಡರು. 45 ಕೆಜಿ ವಿಭಾಗದಲ್ಲಿ ಕೆವಿಎಲ್ ಪವಾನಿ ಕುಮಾರಿ ಬೆಳ್ಳಿ ಪದಕ ಜಯಿಸಿದರು. ಹರ್ಷದಾ ಗೌಡ್ 45 ಕೆಜಿ ವಿಭಾಗದಲ್ಲಿಯೇ ಕಂಚು ಜಯಿಸಿದರು.
ಟೂರ್ನಿಯಲ್ಲಿ 20 ಏಶ್ಯನ್ ದೇಶಗಳ ಒಟ್ಟು 197 ಅಥ್ಲೀಟ್ಗಳು ಭಾಗವಹಿಸಿದ್ದಾರೆ.
Next Story