ಮೂರನೇ ಬಾರಿ ಐಎಸ್ಎಲ್ ಪ್ರಶಸ್ತಿ ಗೆದ್ದ ಎಟಿಕೆ ತಂಡ
ಪಣಜಿ, ಮಾ.14: ಕೊರೋನ ವೈರಸ್ ಭೀತಿಯಿಂದಾಗಿ ಪ್ರೇಕ್ಷಕರಿಲ್ಲದ ಶನಿವಾರ ನಡೆದ ಐಎಸ್ಎಲ್ ಫೈನಲ್ ಪಂದ್ಯದಲ್ಲಿ ಬದ್ಧ ಎದುರಾಳಿ ಚೆನ್ನೈಯಿನ್ ಎಫ್ಸಿಯನ್ನು 3-1 ಅಂತರದಿಂದ ಮಣಿಸಿದ ಅಟ್ಲ್ಲೆಟಿಕೊ ಡಿ ಕೋಲ್ಕತಾ(ಎಟಿಕೆ) ಎಫ್ಸಿ ಮೂರನೇ ಬಾರಿ ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಪ್ರಶಸ್ತಿಯನ್ನು ಬಾಚಿಕೊಂಡು ಇತಿಹಾಸ ನಿರ್ಮಿಸಿತು.
ಜೇವಿಯರ್ ಹೆರ್ನಾಂಡೆಝ್(10ನೇ) ಹಾಗೂ ಎಡು ಗಾರ್ಸಿಯಾ (48ನೇ ನಿಮಿಷ) ಎಟಿಕೆಗೆ 2-0 ಮುನ್ನಡೆ ಒದಗಿಸಿಕೊಟ್ಟರು. 69ನೇ ನಿಮಿಷದಲ್ಲಿ ಗೋಲು ಗಳಿಸಿದ ನೆರಿಜಸ್ ವಾಲ್ಸ್ಸ್ಕಿಸ್ ಚೆನ್ನೈ ತಿರುಗೇಟು ನೀಡಲು ನೆರವಾದರು. ಹೆರ್ನಾಂಡೆಝ್ ಇಂಜುರಿ ಟೈಮ್ನಲ್ಲಿ(90+4 ನಿ.)ಮತ್ತೊಂದು ಗೋಲು ಗಳಿಸಿ ಎಟಿಕೆ ಮೂರನೇ ಬಾರಿ ಪ್ರಶಸ್ತಿ ಜಯಿಸಲು ದೊಡ್ಡ ಕಾಣಿಕೆ ನೀಡಿದರು.
Next Story