ಪ್ಲಿಸ್ಕೋವಾಗೆ ಗೆಲುವು
ಪ್ಯಾರಿಸ್: ಝೆಕ್ನ ಎರಡನೇ ಶ್ರೇಯಾಂಕಿತ ಕರೋಲಿನಾ ಪ್ಲಿಸ್ಕೋವಾ ಮಂಗಳವಾರ ನಡೆದ ಫ್ರೆಂಚ್ ಓಪನ್ ಆರಂಭಿಕ ಸುತ್ತಿನಲ್ಲಿ 6-7 (9) 6-2 6-4 ಅಂತರದಿಂದ ಈಜಿಪ್ಟ್ನ ಮಾಯರ್ ಶೆರೀಫ್ ಅವರನ್ನು ಮಣಿಸಿದ್ದಾರೆ.
ಪ್ಲಿಸ್ಕೋವಾ ಪ್ಯಾರಿಸ್ಗೆ ಬರುವ ಮೊದಲು ಗಾಯದಿಂದ ರೋಮ್ನಲ್ಲಿ ನಡೆದ ಫೈನಲ್ನಲ್ಲಿ ಗಾಯಗೊಂಡು ನಿವೃತ್ತರಾಗಿದ್ದರು. ಪ್ಲಿಸ್ಕೋವಾ ಅವರು ಮುಂದಿನ ಸುತ್ತಿನಲ್ಲಿ 2017ರ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊರನ್ನು ಎದುರಿಸಲಿರುವರು. ಅವರು ಅಮೆರಿಕದ ಮ್ಯಾಡಿಸನ್ ಬ್ರೆಂಗಲ್ರನ್ನು 6-2, 6-1 ಸೆಟ್ಗಳಿಂದ ಸೋಲಿಸಿದರು.
Next Story