ಐಪಿಎಲ್ನಲ್ಲಿ ಬೆಟ್ಟಿಂಗ್ ಆರೋಪ: ಐವರ ಬಂಧನ
ಮೀರತ್, ಅ.6: ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜ್ವರ ಹರಡುವುದರೊಂದಿಗೆ, ಬೆಟ್ಟಿಂಗ್ ಮತ್ತು ಜೂಜಿನ ಚಟುವಟಿಕೆಗಳು ಸಹ ತೀವ್ರಗೊಂಡಿವೆ. ಈ ಬಾರಿ ಐಪಿಎಲ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಸ್ಥಳಾಂತರ ಗೊಂಡಿದ್ದರೂ, ಕಾನೂನುಬಾಹಿರ ಬೆಟ್ಟಿಂಗ್ ದಂಧೆಗೆ ಕಡಿವಾಣ ಸಾಧ್ಯವಾಗಿಲ್ಲ.
ಮೀರತ್ ಹೊಟೇಲ್ನಲ್ಲಿ ಬೆಟ್ಟಿಂಗ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಬಂಧಿತ ಆರೋಪಿಗಳಲ್ಲಿ ಹೊಟೇಲ್ ಮ್ಯಾನೇಜರ್ ಕೂಡ ಇದ್ದಾನೆ. ಬಂಧಿತರಿಂದ ಹಲವು ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೀರತ್ನ ಎಸ್ಪಿಅಖಿಲೇಶ್ ನಾರಾಯಣ್ ಸಿಂಗ್ ತಿಳಿಸಿದ್ದಾರೆ.
Next Story