ಗಾಯಾಳು ರಿಷಭ್ ಪಂತ್ ಹೊರಕ್ಕೆ
ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಗಾಯದ ಕಾರಣದಿಂದಾಗಿ ಒಂದು ವಾರ ತಂಡದ ಸೇವೆಗೆ ಲಭ್ಯರಿಲ್ಲ.
ಶುಕ್ರವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು.
ರವಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಆಡಲಿಲ್ಲ. ಆಸ್ಟ್ರೇಲಿಯದ ಅಲೆಕ್ಸ್ ಕ್ಯಾರಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದರು.
ಐಪಿಎಲ್ ತಂಡಗಳು ತಮ್ಮ ಆಡುವ ಇಲೆವೆನ್ನಲ್ಲಿ ಗರಿಷ್ಠ ನಾಲ್ಕು ಮಂದಿ ವಿದೇಶಿ ಆಟಗಾರರನ್ನು ಕಣಕ್ಕಿಳಿಸಲು ಅವಕಾಶವಿದೆ. ಇದರಿಂದಾಗಿ ಮಾರ್ಕಸ್ ಸ್ಟೋಯಿನಿಸ್, ಕಾಗಿಸೊ ರಬಡಾ ಮತ್ತು ಅನ್ರಿಕ್ ನಾರ್ಟ್ಜೆ ದಿಲ್ಲಿ ತಂಡದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಖಚಿತವಾಗಿದೆ.
Next Story