ಕೆಕೆಆರ್ ನಾಯಕತ್ವದಲ್ಲಿ ಬದಲಾವಣೆ: ಕಾರ್ತಿಕ್ ಬದಲಿಗೆ ಮೊರ್ಗನ್
ಹೊಸದಿಲ್ಲಿ: ದಿನೇಶ್ ಕಾರ್ತಿಕ್ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್)ತಂಡದ ನಾಯಕತ್ವವನ್ನು ಇಂಗ್ಲೆಂಡ್ನ ಸೀಮಿತ ಓವರ್ ಕ್ರಿಕೆಟ್ ನಾಯಕ ಇಯಾನ್ ಮೊರ್ಗನ್ ಗೆ ಹಸ್ತಾಂತರಿಸಲು ನಿರ್ಧರಿಸಿದ್ದಾರೆ ಎಂದು ಶುಕ್ರವಾರ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಫ್ರಾಂಚೈಸಿ ಘೋಷಿಸಿದೆ.
ದಿನೇಶ್ ಕಾರ್ತಿಕ್ ಬ್ಯಾಟಿಂಗ್ನತ್ತ ಹೆಚ್ಚು ಗಮನ ನೀಡಲು ಬಯಸಿದ್ದು, ತಂಡದ ಗೆಲುವಿಗೆ ಇನ್ನಷ್ಟು ಕಾಣಿಕೆ ನೀಡಲು ಬಯಸಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ನಾಯಕನಾಗಿ ತಂಡಕ್ಕೆ ಕಾಣಿಕೆ ನೀಡಿರುವ ದಿನೇಶ್ ಕಾರ್ತಿಕ್ಗೆ ಕೆಕೆಆರ್ ಆಡಳಿತ ಮಂಡಳಿಯು ಕೃತಜ್ಞತೆ ಸಲ್ಲಿಸಿದೆ. ಮೊರ್ಗನ್ಗೆ ಶುಭಾಶಯವನ್ನು ಕೋರಿದೆ.
ಕೆಕೆಆರ್ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಅಬುಧಾಬಿಯಲ್ಲಿ ಎದುರಿಸಲಿದೆ.
ಕೆಕೆಆರ್ ಪ್ರಸ್ತುತ ಐಪಿಎಲ್ನ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, 4ರಲ್ಲಿ ಜಯ ಹಾಗೂ ಮೂರರಲ್ಲಿ ಸೋತಿದೆ. ತಂಡವನ್ನು ಸ್ಥಿರ ಪ್ರದರ್ಶನ ನೀಡುವತ್ತ ಮುನ್ನಡೆಸುವ ಗುರಿ ಮೊರ್ಗನ್ ಮುಂದಿದೆೆ.
Next Story