ಐಪಿಎಲ್ ಸಾಧನೆ ಆತ್ಮವಿಶ್ವಾಸವನ್ನು ಮೂಡಿಸಿದೆ: ಮುಹಮ್ಮದ್ ಶಮಿ
ಸಿಡ್ನಿ, ನ.21: ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತದ ವೇಗಿ ಮುಹಮ್ಮದ್ ಶಮಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಗೆ ಯಾವುದೇ ಒತ್ತಡವಿಲ್ಲದೆ ತಯಾರಿಗೆ ಅವರಿಗೆ ಅವಕಾಶ ಸಿಕ್ಕಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಡಬಲ್ ಸೂಪರ್ ಓವರ್ ಪಂದ್ಯದಲ್ಲಿ ಐದು ರನ್ಗಳ ಅದ್ಭುತ ರಕ್ಷಣೆ ಸೇರಿದಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಶಮಿ ಐಪಿಎಲ್ ಟೂರ್ನಿಯಲ್ಲಿ 20 ವಿಕೆಟ್ ಗಳಿಸಿದ್ದಾರೆ. ‘‘ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪರ ನಾನು ನೀಡಿರುವ ಪ್ರದರ್ಶನ ನನಗೆ ಸಾಕಷ್ಟು ವಿಶ್ವಾಸವನ್ನು ನೀಡಿದೆ ’’ಎಂದು ಶಮಿ ಶನಿವಾರ ಬಿಸಿಸಿಐ ಟಿವಿಗೆ ತಿಳಿಸಿದರು.
ಕಲಾತ್ಮಕ ಟೆಸ್ಟ್ ಬೌಲರ್ ಶಮಿ ಅವರು ಐಪಿಎಲ್ ತನ್ನಿಂದ ಹೊರೆಯನ್ನು ಕೆಳಗಿಳಿಸಿದೆ ಎಂದು ಹೇಳಿದ್ದಾರೆ.
‘‘ದೊಡ್ಡ ಅನುಕೂಲವೆಂದರೆ ನಾನು ಈಗ ಮುಂಬರುವ ಸರಣಿಗೆ ಯಾವುದೇ ಒತ್ತಡವಿಲ್ಲದೆ ತಯಾರಿ ಮಾಡಬಹುದು. ನನ್ನ ಮೇಲೆ ಯಾವುದೇ ಹೊರೆ ಇಲ್ಲ. ಈ ಸಮಯದಲ್ಲಿ ನಾನು ತುಂಬಾ ಆರಾಮದಾಯಕವಾಗಿದ್ದೇನೆ.ನನ್ನ ಬೌಲಿಂಗ್ ಮತ್ತು ಲಾಕ್ಡೌನ್ ವೇಳೆ ಫಿಟ್ನೆಸ್ನಲ್ಲಿ ನಾನು ತುಂಬಾ ಶ್ರಮಿಸಿದ್ದೇನೆ ’’ಎಂದು ಹೇಳಿದ್ದಾರೆ.