ಐಎಸ್ ಎಲ್: ಹೈದರಾಬಾದ್ ಜಯಭೇರಿ
ಬಂಬೊಲಿಮ್: ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್)ನಲ್ಲಿ ಸೋಮವಾರ ನಡೆದ ನಾಲ್ಕನೇ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ಒಡಿಶಾ ಎಫ್ ಸಿ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಹೈದರಾಬಾದ್ ಪರ ಅರಿಡಾನೆ ಸಂಟಾನಾ 34ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದರು.
19ನೇ ನಿಮಿಷದಲ್ಲಿ ಹೈದರಾಬಾದ್ ತಂಡದ ನಿಖಿಲ್ ಪೂಜಾರಿ ಗೋಲು ಗಳಿಸಲು ಯತ್ನಿಸಿದರು. ಆದರೆ ಚೆಂಡು ಗೋಲು ಪೆಟ್ಟಿಗೆಗೆ ಸೇರಲಿಲ್ಲ.
ಈ ಹಿಂದೆ ಎರಡು ಬಾರಿ ಒಡಿಶಾವನ್ನು ಮುಖಾಮುಖಿಯಾಗಿದ್ದ ಹೈದರಾಬಾದ್ ಎರಡೂ ಬಾರಿಯೂ ಸೋತಿತ್ತು. ಇದೀಗ ಹಿಂದಿನ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡಿದೆ.
ಉಭಯ ತಂಡಗಳು ಕಳೆದ ಋತುವಿನಲ್ಲಿ ಐಎಸ್ ಎಲ್ ಗೆ ಪಾದಾರ್ಪಣೆ ಗೈದಿದ್ದವು. ಹೈದರಾಬಾದ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದಿತ್ತು. ಒಡಿಶಾ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿತ್ತು. ಸ್ವಲ್ಪದರಲ್ಲೇ ಸೆಮಿ ಫೈನಲ್ ಅವಕಾಶವನ್ನು ಕಳೆದುಕೊಂಡಿತ್ತು.
Next Story