ಮೊದಲ ಟೆಸ್ಟ್: ಭಾರತದ ನೀರಸ ಆರಂಭ
ಟೀ ವಿರಾಮಕ್ಕೆ 107/3, ಕೊಹ್ಲಿ ಔಟಾಗದೆ 39
ಅಡಿಲೇಡ್: ಆಸ್ಟ್ರೇಲಿಯ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಗುರುವಾರ ಇಲ್ಲಿ ಆರಂಭವಾಗಿದೆ. ಅಡಿಲೇಡ್ ಓವಲ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಹಗಲುರಾತ್ರಿ ಪಂದ್ಯವಾಗಿದ್ದು, ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಭಾರತವು ನೀರಸ ಆರಂಭ ಪಡೆದಿದೆ. ಟೀ ವಿರಾಮದ ವೇಳೆಗೆ ಭಾರತವು 55 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 107 ರನ್ ಗಳಿಸಿದೆ.
ನಾಯಕ ವಿರಾಟ್ ಕೊಹ್ಲಿ(ಔಟಾಗದೆ 39, 111 ಎಸೆತ, 4 ಬೌಂಡರಿ) ಹಾಗೂ ಅಜಿಂಕ್ಯ ರಹಾನೆ(ಔಟಾಗದೆ2)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಹಾಗೂ ಮಾಯಾಂಕ್ ಅಗರ್ವಾಲ್ ಉತ್ತಮ ಆರಂಭ ಒದಗಿಸಲು ವಿಫಲರಾದರು. ಮುಂಬೈನ ಯುವ ಬ್ಯಾಟ್ಸ್ಮನ್ ಶಾ ಮೊದಲ ಓವರ್ನ 2ನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಮಾಯಾಂಕ್ ಅಗರ್ವಾಲ್ 40 ಎಸೆತಗಳನ್ನು ಎದುರಿಸಿ 17 ರನ್ ಗಳಿಸಿ ಕಮಿನ್ಸ್ಗೆ ಕ್ಲೀನ್ ಬೌಲ್ಡಾದರು.
Next Story