ಐಎಸ್ ಎಲ್: ಎಟಿಕೆ ಮೋಹನ್ ಬಗಾನ್ ತಂಡಕ್ಕೆ ಜಯ
ಪಣಜಿ: ಈ ಋತುವಿನಲ್ಲಿ ಅನಿಶ್ಚಿತ ಫಾರ್ಮ್ ನಲ್ಲಿರುವ ಡೇವಿಡ್ ವಿಲಿಯಮ್ಸ್ 33ನೇ ನಿಮಿಷದಲ್ಲಿ ದಾಖಲಿಸಿದ ಗೋಲು ನೆರವಿನಿಂದ ಎಟಿಕೆ ಮೋಹನ್ ಬಗಾನ್ ತಂಡ ಸೋಮವಾರ ನಡೆದ ಐಎಸ್ ಎಲ್ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತು.
ವಿಲಿಯಮ್ಸ್ ಐಎಸ್ ಎಲ್ ನಲ್ಲಿ ಗಳಿಸಿರುವ 8ನೇ ಗೋಲು ಇದಾಗಿದೆ. ಬೆಂಗಳೂರು ತಂಡದ ವಿರುದ್ವವೇ ನಾಲ್ಕುಗೋಲು ಗಳಿಸಿದ್ದರು.
7 ಪಂದ್ಯಗಳಲ್ಲಿ 16 ಅಂಕ ಗಳಿಸಿರುವ ಕೋಲ್ಕತಾದ ಮೋಹನ್ ಬಗಾನ್ ತಂಡ ಮುಂಬೈ ಸಿಟಿಯೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿದೆ. ಮೊದಲ ಸೋಲು ಕಂಡಿರುವ ಬೆಂಗಳೂರು ತಂಡ 12 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ.
Next Story