ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ಸಿರಾಜ್, ಸಮಾಧಾನಪಡಿಸಿದ ಬುಮ್ರಾ
-

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ಆರಂಭವಾಗುವ ಸ್ವಲ್ಪ ಮೊದಲು ಭಾರತದ ರಾಷ್ಟ್ರ ಗೀತೆಯನ್ನು ಹಾಡುವಾಗ ಯುವ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಕಣ್ಣೀರಿಟ್ಟಿರುವ ಪ್ರಸಂಗ ನಡೆದಿದೆ. ಸಹ ಬೌಲರ್ ಜಸ್ ಪ್ರೀತ್ ಬುಮ್ರಾ ಅವರನ್ನು ಸಮಾಧಾನಪಡಿಸಿದ್ದಾರೆ.
ರಾಷ್ಟ್ರಗೀತೆ ಹಾಡುವಾಗ ಸಿರಾಜ್ ಅಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತೀಯ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯದಲ್ಲಿದ್ದಾಗಲೇ ಸಿರಾಜ್ ಅವರ ತಂದೆ ಮುಹಮ್ಮದ್ ಗೌಸ್ ನಿಧನರಾಗಿದ್ದರು. ಸಿರಾಜ್ ಅವರಿಗೆ ತಂದೆಯ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.
"ನಾನು ಭಾರತಕ್ಕಾಗಿ ಆಡುವುದನ್ನು ಮುಂದುವರಿಸುವೆ. ನನ್ನ ದೇಶಕ್ಕೆ ಹೆಮ್ಮೆ ತರುವೆ. ನನ್ನ ತಂದೆಯ ಕನಸನ್ನು ಈಡೇರಿಸಲು ಬಯಸಿದ್ದೇನೆ'' ಎಂದು ತಂದೆ ತೀರಿಕೊಂಡಿದ್ದ ಸಮಯದಲ್ಲಿ ಸಿರಾಜ್ ಪ್ರತಿಕ್ರಿಯಿಸಿದ್ದರು.
ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಗಾಯಗೊಂಡಿದ್ದ ಕಾರಣ ಸಿರಾಜ್ ಕಳೆದ ತಿಂಗಳು ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದರು. ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಐದು ವಿಕೆಟ್ ಗಳನ್ನು ಕಬಳಿಸಿದ್ದರು. ಭಾರತವು ಈಪಂದ್ಯವನ್ನು 8 ವಿಕೆಟ್ ಗಳಿಂದ ಜಯಿಸುವುದರೊಂದಿಗೆ ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಭಾರತದ ರಾಷ್ಟಗೀತೆ ಮೊಳಗಿದಾಗ ಸಿರಾಜ್ ಅಳುತ್ತಿರುವ ದೃಶ್ಯವು ವೈರಲ್ ಆಗಿದೆ. ಹೈದರಾಬಾದ್ ನ 26ರ ವಯಸ್ಸಿನ ಸಿರಾಜ್ ಕಣ್ಣೀರಿಡುತ್ತಿರುವುದನ್ನು ಗಮನಿಸಿದ ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಅವರನ್ನು ಸಮಾಧಾನಪಡಿಸಿದರು.
ಟಾಸ್ ಜಯಿಸಿರುವ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮಳೆಯಿಂದಾಗಿ ಪಂದ್ಯ ನಿಂತಾಗ ಆತಿಥೇಯರು 21 ರನ್ ಗೆ 1 ವಿಕೆಟ್ ಕಳೆದುಕೊಂಡಿದ್ದರು. 'ಟರ್ಮಿನೇಟರ್' ಸಿರಾಜ್ ಅವರು ಮತ್ತೊಮ್ಮೆ ಹೊಸ ಚೆಂಡಿನಲ್ಲಿ ಡೇವಿಡ್ ವಾರ್ನರ್ ವಿಕೆಟನ್ನು ಉರುಳಿಸಿದ್ದರು.
ತನ್ನ ಚೊಚ್ಚಲ ಪಂದ್ಯದಲ್ಲಿ ಸಲಹೆಗಳನ್ನು ನೀಡಿದ್ದ ಬುಮ್ರಾಗೆ ಕೃತಜ್ಞತೆ ಸಲ್ಲಿಸಿದ್ದ ಸಿರಾಜ್, ಬುಮ್ರಾರಂತಹ ಹಿರಿಯ ಆಟಗಾರರು ನನ್ನಂತಹ ಕಿರಿಯ ಬೌಲರ್ ಗೆ ಆತ್ಮವಿಶ್ವಾಸವನ್ನು ತುಂಬುತ್ತಿದ್ದಾರೆ. ಪ್ರತಿಯೊಂದು ಚೆಂಡಿನ ಮೇಲೆ ಗಮನ ನೀಡುವಂತೆ ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ.
Mohammed Siraj In Tears While Singing Indian National Anthem #AUSvIND #mohammadsiraj #TeamIndia #IndianCricketTeam pic.twitter.com/0lwTXJ6O0P
— SANKARSAN DAS (@SANKARSANDAS15) January 7, 2021
Siraj crying while singing national anthem . pic.twitter.com/XEreYkneLC
— NITISH BASSI (@NitishBassi) January 6, 2021
Mohammed Siraj in tears during the national anthem
— Cricket Bakwas (@Cricketbakwaas) January 6, 2021
A small town boy living his dream of playing for his country
Passion & Emotion #SydneyTest #siraj #india #australia #ausvsind #INDvAUS pic.twitter.com/DGZWl4dvck
Not sure if that what sunblock or emotions but it was so moving to see Siraj in tears during the National anthem. Go well man, live your dream ♥️
— Ricky talks cricket (@CrickeyRicky) January 6, 2021
Mohammed Siraj's tears swelling up and falling over for the Indian national anthem is already my moment of the day. #AUSvIND
— Ananthasubramanian (@_chinmusic) January 6, 2021
3rd Test. 3.3: WICKET! D Warner (5) is out, c Cheteshwar Pujara b Mohammed Siraj, 6/1 https://t.co/xHO9oit5X4 #AUSvIND
— BCCI (@BCCI) January 6, 2021
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.