ಮೂರನೇ ಟೆಸ್ಟ್: ಮಳೆಬಾಧಿತ ಪಂದ್ಯದಲ್ಲಿ ಆಸ್ಟ್ರೇಲಿಯದ ಸಾಧಾರಣ ಆರಂಭ
ಸಿಡ್ನಿ: ಮಳೆಬಾಧಿತ ಮೂರನೇ ಟೆಸ್ಟ್ ಪಂದ್ಯದ ಮೊದಲದಿನದಾಟದಂತ್ಯಕ್ಕೆ ಆಸ್ಟ್ರೇಲಿಯ 55 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು.
ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಹಿರಿಯ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 4ನೇ ಓವರ್ ನಲ್ಲಿ ಕೇವಲ 5 ರನ್ ಗಳಿಸಿ ಮುಹಮ್ಮದ್ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ಆಗ ಜೊತೆಯಾದ ಪುಕೋವ್ಸ್ಕಿ(62) ಹಾಗೂ ಲ್ಯಾಬುಶೇನ್ ಎರಡನೇ ವಿಕೆಟ್ ಗೆ ಬರೋಬ್ಬರಿ 100 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ರಿಂದ ಎರಡು ಬಾರಿ ಜೀವದಾನ ಪಡೆದಿದ್ದ ಪುಕೋವ್ಸ್ಕಿ (62, 110 ಎಸೆತ, 4 ಬೌಂಡರಿ) ತನ್ನ ಚೊಚ್ಚಲಪಂದ್ಯದಲ್ಲೇ ಗಮನ ಸೆಳೆದರು.
ಲ್ಯಾಬುಶೇನ್ ಔಟಾಗದೆ 67(149 ಎಸೆತ, 8 ಬೌಂಡರಿ) ಹಾಗೂ ಸ್ಟೀವನ್ ಸ್ಮಿತ್(ಔಟಾಗದೆ 31) ಮೂರನೇ ವಿಕೆಟ್ ಗೆ 160 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಮುಹಮ್ಮದ್ ಸಿರಾಜ್(1-46) ಹಾಗೂ ನವದೀಪ್ ಸೈನಿ(1-32)ತಲಾಒಂದು ವಿಕೆಟ್ ಪಡೆದರು.
7.1 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿದ್ದಾಗ ಮಳೆ ಜೋರಾಗಿ ಸುರಿಯಿತು. ಹೀಗಾಗಿ ಲಂಚ್ ವಿರಾಮದ ಬಳಿಕವೂ ಪಂದ್ಯ ಆರಂಭಿಸಲು ಸಾಧ್ಯವಾಗಲಿಲ್ಲ