ಪಾಕಿಸ್ತಾನ ತಂಡಕ್ಕೆ ರವೂಫ್, ಹಸನ್ ಅಲಿ ಸೇರ್ಪಡೆ
ಆಫ್ರಿಕ ವಿರುದ್ಧದ ಮೊದಲ ಟೆಸ್ಟ್
ಕರಾಚಿ, ಜ.24: ದಕ್ಷಿಣ ಆಫ್ರಿಕ ವಿರುದ್ಧ ಮಂಗಳವಾರ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಆಯ್ಕೆ ಸಮಿತಿಯು ರವಿವಾರ ಪ್ರಕಟಿಸಿದೆ.
ಪಾಕಿಸ್ತಾನದ 17 ಸದಸ್ಯರ ತಂಡದಲ್ಲಿ ವೇಗಿಗಳಾದ ಹಸನ್ ಅಲಿ ಮತ್ತು ಹಾರಿಸ್ ರವೂಫ್ ಸೇರಿದ್ದಾರೆ. ಮೊದಲ ಟೆಸ್ಟ್ನಲ್ಲಿ ಇಮ್ರಾನ್ ಬಟ್ ಓಪನರ್ ಆಗಿ ಆಡಲು ಸಜ್ಜಾಗಿದ್ದಾರೆ.
ಗಾಯದಿಂದಾಗಿ ನ್ಯೂಝಿಲ್ಯಾಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ಬಾಬರ್ ಅಝಮ್ ಅವರು ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪಾಕ್ ತಂಡಕ್ಕೆ ಮರಳಿದ್ದಾರೆ.
ಉಳಿದ ಮೂವರು ಆಟಗಾರರು ತಂಡದಲ್ಲಿ ಮುಂದುವರಿಯಲಿದ್ದು, ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಭ್ಯಾಸ ಮತ್ತು ತರಬೇತಿ ಅವಧಿಯಲ್ಲಿ ಭಾಗವಹಿಸಲಿದ್ದಾರೆ.
<ಮೊದಲ ಟೆಸ್ಟ್ಗೆ ಪಾಕಿಸ್ತಾನ ತಂಡ
: ಅಬಿದ್ ಅಲಿ ಮತ್ತು ಇಮ್ರಾನ್ ಬಟ್(ಆರಂಭಿಕ ಬ್ಯಾಟ್ಸ್ಮನ್ಗಳು), ಅಝರ್ ಅಲಿ, ಬಾಬರ್ ಅಝಮ್, ಫವಾದ್ ಆಲಂ ಮತ್ತು ಸೌದ್ ಶಕೀಲ್ (ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ಗಳು ), ಫಹೀಮ್ ಅಶ್ರಫ್ ಮತ್ತು ಮುಹಮ್ಮದ್ ನವಾಝ್ (ಆಲ್ರೌಂಡರ್ಗಳು ) ಮುಹಮ್ಮದ್ ರಿಝ್ವ್ನ್ ಮತ್ತು ಸರ್ಫರಾಝ್ ಅಹ್ಮದ್(ವಿಕೆಟ್ ಕೀಪರ್ಗಳು), ನೌಮನ್ ಅಲಿ, ಸಾಜಿದ್ ಖಾನ್ ಮತ್ತು ಯಾಸಿರ್ ಶಾ (ಸ್ಪಿನ್ನರ್ಗಳು),ಹಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಶಾ ಅಫ್ರಿದಿ ಮತ್ತು ತಬೀಶ್ ಖಾನ್(ವೇಗದ ಬೌಲರ್ಗಳು).