ಇಟಲಿ ಆಟಗಾರರ ನಡುವೆ ಮಾತಿನ ಚಕಮಕಿ
ಆಸ್ಟ್ರೇಲಿಯನ್ ಓಪನ್
ಮೆಲ್ಬೊರ್ನ್: ಇಟಲಿಯ ಇಬ್ಬರು ಆಟಗಾರರಾದ ಅಬಿಯೊ ಫೊಗ್ನಿನಿ ಮತ್ತು ಸಾಲ್ವಟೋರ್ ಕರೂಸೊ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಪಂದ್ಯ ಗುರುವಾರ ಮುಗಿದ ಬೆನ್ನಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ಸಂಭವಿಸಿ, ಗೊಂದಲ ಉಂಟಾಗಿದೆ.
ಜಾನ್ ಕೇನ್ ಅರೆನಾದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ 16ನೇ ಶ್ರೇಯಾಂಕಿತ ಫೊಗ್ನಿನಿ ಅವರು ಸಾಲ್ವಟೋರ್ ಕರೂಸೊರನ್ನು 4-6, 6-2,2-6,6-3, 7-6 (12) ಅಂತರದಲ್ಲಿ ಮಣಿಸಿದರು.
ಕೆಲವು ಅಂಶಗಳಲ್ಲಿ ಕರೂಸೊ ಅದೃಷ್ಟಶಾಲಿಯಾಗಿದ್ದಾರೆೆ ಎಂದು ಪಂದ್ಯದ ಬಳಿಕ ಫೊಗ್ನಿನಿ ಮೆಚ್ಚುಗೆ ವ್ಯಕ್ತಪಡಿಸಿ, ಸಾಂಪ್ರದಾಯಿಕವಾಗಿ ಹ್ಯಾಂಡ್ಶೇಕ್ ಮಾಡಲು ತೆರಳಿದಾಗ ಕರುಸೊ ಸಿಟ್ಟಿನಿಂದ ಅವರಲ್ಲಿ ವಾಗ್ವಾದಕ್ಕೆ ಇಳಿದರು. ಎನ್ನಲಾಗಿದೆ. ಪಂದ್ಯದ ಉಸ್ತುವಾರಿ ಹೊತ್ತ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಇವರ ನಡುವಿನ ವಾಕ್ಸಮರವನ್ನು ಕೊನೆಗೊಳಿಸಿದರು. ಫೊಗ್ನಿನಿ ಎರಡನೇ ಬಾರಿ ವಿವಾದಕ್ಕೆ ಸಿಲುಕಿದ್ದಾರೆ. ಈ ಘಟನೆಯ ಬೆನ್ನಲ್ಲೆ ಫೊಗ್ನಿನಿ ತನ್ನ ಅಂಗಿಯನ್ನು ಹರಿದು ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದರು.