ಜೊಕೊವಿಕ್ ಫೈನಲ್ಗೆ
ಮೆಲ್ಬೋರ್ನ್: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ 9ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ಸೆಮಿ ಫೈನಲ್ನಲ್ಲಿ ಸರ್ಬಿಯ ಆಟಗಾರ ಜೊಕೊವಿಕ್ ಅವರು ರಶ್ಯದ ಕ್ವಾಲಿಫೈಯರ್ ಏಸ್ಯನ್ ಕರಾಟ್ಸೆವಾರನ್ನು 6-3, 6-4, 6-2 ಸೆಟ್ಗಳ ಅಂತರದಿಂದ ಮಣಿಸಿದರು.
ಜೊಕೊವಿಕ್ ರವಿವಾರ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಸ್ಟೆಫನೊಸ್ ಸಿಟ್ಸಿಪಾಸ್ ಅಥವಾ ಡ್ಯಾನಿಲ್ ಮೆಡ್ವಡೆವ್ರನ್ನು ಎದುರಿಸಲಿದ್ದಾರೆ.
Next Story