ಐಪಿಎಲ್ ಟೂರ್ನಿಗೆ ಮೊಹಾಲಿ ಸೇರ್ಪಡೆಗೆ ಪಂಜಾಬ್ ಸಿಎಂ ಒತ್ತಾಯ
ಮೊಹಾಲಿ: ಮುಂಬರುವ ಐಪಿಎಲ್ ನಡೆಯಲಿರುವ ಕ್ರೀಡಾಂಗಣಗಳ ಪಟ್ಟಿಯಿಂದ ಮೊಹಾಲಿಯನ್ನು ಹೊರಗಿಟ್ಟಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಂಗಳವಾರ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಕೋವಿಡ್ -19 ಹಿನ್ನೆಲೆಯಲ್ಲಿ ಆಟಗಾರರ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ತಮ್ಮ ಸರಕಾರ ಮಾಡಲಿದೆ ಎಂದು ಸಿಎಂ ಭರವಸೆ ನೀಡಿದರು.
ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಕ್ರೀಡಾಂಗಣ (ಪಿಸಿಎ) ಪಂಜಾಬ್ ಕಿಂಗ್ಸ್ ಫ್ರಾಂಚೈಸ್ನ ನೆಲೆಯಾಗಿದೆ.
ದಿಲ್ಲಿ, ಅಹಮದಾಬಾದ್, ಕೋಲ್ಕತಾ, ಬೆಂಗಳೂರು ಮತ್ತು ಚೆನ್ನೈಗಳನ್ನು ಸಂಭಾವ್ಯ ಕ್ರೀಡಾಂಗಣಗಳಾಗಿ ಆಯ್ಕೆ ಮಾಡಲಾಗಿದೆ. ಆದರೆ ಬಿಸಿಸಿಐ ಇನ್ನೂ ಈ ಬಗ್ಗೆ ನಿರ್ಧಾರ ಪ್ರಕಟಿಸಿಲ್ಲ. ಮುಂಬೈಯನ್ನ್ನು ಪರಿಗಣಿಸಲಾಗಿದ್ದರೂ ಕೋವಿಡ್ ಪ್ರಕರಣಗಳ ಹೆಚ್ಚಳದಿಂದಾಗಿ ಐಪಿಎಲ್ ಪಂದ್ಯಗಳು ಅಲ್ಲಿ ನಡೆಯುವ ಸಾಧ್ಯತೆಯಿಲ್ಲ.
Next Story