ಐಪಿಎಲ್ನಲ್ಲಿ ಹಣಕ್ಕೆ ಒತ್ತು ನೀಡಲಾಗುತ್ತದೆ ಎಂಬ ಹೇಳಿಕೆಗೆ ಕ್ಷಮೆಕೋರಿದ ಡೇಲ್ ಸ್ಟೇಯ್ನ್
ಜೋಹಾನ್ಸ್ ಬರ್ಗ್: ಪಾಕಿಸ್ತಾನ ಸೂಪರ್ ಲೀಗ್ ನಂತಹ ಜಾಗತಿಕ ಟ್ವೆಂಟಿ-20 ಟೂರ್ನಮೆಂಟ್ನಲ್ಲಿ ಇಂಡಿಯಾ ಪ್ರೀಮಿಯರ್ ಲೀಗ್ (ಐಪಿಎಲ್)ಗಿಂತ ಹೆಚ್ಚು ಬಹುಮಾನ ಪಡೆದಿದ್ದೆ. ಐಪಿಎಲ್ ನಲ್ಲಿ ಹಣಕ್ಕೆ ಹೆಚ್ಚು ಮಹತ್ವ ನೀಡುವ ಕಾರಣ ಕ್ರಿಕೆಟ್ ಗೆ ಎರಡನೇ ಸ್ಥಾನ ನೀಡಲಾಗುತ್ತದೆ ಎಂದು ತಾನು ನೀಡಿರುವ ಹೇಳಿಕೆಗೆ ದ.ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಇಂದು ಸ್ಪಷ್ಟನೆ ನೀಡಿದ್ದಾರೆ.
ತನ್ನ ಹೇಳಿಕೆಗೆ ಬುಧವಾರ ಕ್ಷಮೆಯಾಚಿಸಿದ ಸ್ಟೇಯ್ನ್, ನನ್ನ ಹೇಳಿಕೆಯು ಐಪಿಎಲ್ ಲೀಗ್ ನ್ನು ಕೆಳ ದರ್ಜೆಗೆ ತಳ್ಳುವ, ಅವಮಾನಿಸುವ ಹಾಗೂ ಇತರ ಯಾವುದೇ ಲೀಗ್ ಗೆ ಹೋಲಿಸುವ ಉದ್ದೇಶ ಹೊಂದಿರಲಿಲ್ಲ. ಸಾಮಾಜಿಕ ಮಾಧ್ಯಮ ನನ್ನ ಮಾತನ್ನು ತಿರುಚಿವೆ ಎಂದರು.
ಸ್ಟೇಯ್ನ್ 2021ರ ಐಪಿಎಲ್ ನಿಂದದೂರ ಉಳಿದಿದ್ದು, ಇತರ ಯಾವುದೇ ಫ್ರಾಂಚೈಸಿಯಲ್ಲಿ ಭಾಗವಹಿಸುವುದಿಲ್ಲ ಎಂದು ಜನವರಿಯಲ್ಲಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
Next Story