14ನೇ ಆವೃತ್ತಿಯ ಐಪಿಎಲ್ ಎಪ್ರಿಲ್ 9ರಿಂದ ಆರಂಭ?
ಹೊಸದಿಲ್ಲಿ: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟ್ವೆಂಟಿ-20 ಟೂರ್ನಮೆಂಟ್ ಎಪ್ರಿಲ್ 9 ರಿಂದ ಮೇ 30ರ ತನಕ ದೇಶದ 6 ಸ್ಥಳಗಳಲ್ಲಿ ನಡೆಯಲಿದೆ ಎಂದು ಇಂಡಿಯಾಟುಡೆ ಟಾಟ್ ಇನ್ ಮೂಲಗಳು ತಿಳಿಸಿವೆ.
ಐಪಿಎಲ್- 2021 ಟೂರ್ನಿಯು ಅಹಮದಾಬಾದ್, ಚೆನ್ನೈ, ಬೆಂಗಳೂರು, ಹೊಸದಿಲ್ಲಿ, ಕೋಲ್ಕತಾ ಹಾಗೂ ಮುಂಬೈನಲ್ಲಿ ಜೈವಿಕ-ಸುರಕ್ಷಿತ ವಾತಾವರಣದಲ್ಲಿ ನಡೆಯಲಿದೆ. 52 ದಿನಗಳ ಕಾಲ ನಡೆಯುವ ಟೂರ್ನಮೆಂಟ್ ನಲ್ಲಿ ಒಟ್ಟು 60 ಪಂದ್ಯಗಳು ಇರುತ್ತವೆ.
Next Story